October 9, 2026
Friday, October 9, 2026
spot_img

ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟೇ ಇರಲಿ, ಬಾಡಿ ಶೇಮಿಂಗ್‌ ತಪ್ಪು! ಕಟ್ರೀನಾ ಕೈಫ್ ಪರ ನಿಂತ ರಮ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕಟ್ರೀನಾ ಕೈಫ್‌ ಇತ್ತೀಚೆಗೆ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಮಗು ಆದ ಬಳಿಕ ಇದೇ ಮೊದಲ ಬಾರಿಗೆ ಕಟ್ರೀನಾ ಕ್ಯಾಮರಾ ಮುಂದೆ ಬಂದಿದ್ದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಆದರೆ ಕೆಲವರು ಕಟ್ರೀನಾ ಕೈಫ್‌ ಸಿಕ್ಕಾಪಟ್ಟೆ ದಪ್ಪ ಆಗಿದ್ದಾರೆ, ಅವರ ಕಥೆ ಮುಗೀತು, ಇನ್ನು ಇಂಡಸ್ಟ್ರಿಗೆ ಟಾಟಾ ಬೈ ಬೈ ಹೇಳೋ ಟೈಮ್‌ ಬಂತು ಎಂದು ಕಮೆಂಟ್‌ ಮಾಡಿದ್ದರು. ಈ ವಿಷಯವಾಗಿ ನಟಿ ರಮ್ಯಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು, ಟ್ರೋಲ್‌ ಮಾಡೋರ ಬಾಯಿ ಮುಚ್ಚಿಸಿದ್ದಾರೆ.

In her prime ಅಂದ್ರೇನು?

ಕಟ್ರೀನಾ ತಮ್ಮ ಪ್ರೈಮ್‌ನಲ್ಲಿ ಸ್ಲಿಮ್‌ ಆಗಿದ್ದರು. ಈಗ ಹೇಗಾಗಿದ್ದಾರೆ ಎನ್ನುವ ಫೋಟೊವೊಂದನ್ನು ಇತರರು ಪೋಸ್ಟ್‌ ಮಾಡಿದ್ದರು. ಇದೇ ಫೋಟೊವನ್ನು ರಮ್ಯಾ ರೀ ಪೋಸ್ಟ್‌ ಮಾಡಿ, ಇನ್‌ ಹರ್‌ ಪ್ರೈಮ್‌ ಅಂದ್ರೇನು? ಮಹಿಳೆಯರು ಎಕ್ಸ್‌ಪೈರಿ ಡೇಟ್‌ ಜೊತೆ ಹುಟ್ಟಿರ್ತಾರಾ? ಮಹಿಳೆಯ ಒಂದು ಏಜ್‌ನ್ನು ಪ್ರೈಮ್‌ ಅಂತ ಡಿಸೈಡ್‌ ಮಾಡೋಕೆ ನೀವ್ಯಾರು? ತಾಯ್ತನದ ಬಗ್ಗೆ ಎಬಿಸಿಡಿ ಗೊತ್ತಾ? ಪ್ರೆಗ್ನೆನ್ಸಿ, ತಾಯ್ತನ, ಪೆರಿ ಮೆನಾಪಾಸ್‌ ವೇಳೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಗೊತ್ತಾ? ಇದು ಅವರ ಲೈಫ್‌ನ ಕೆಳಘಟ್ಟ ಅಲ್ಲ. ಇದು ಜಸ್ಟ್‌ ಜೀವನ. ಸೊಂಟದ ಅಳತೆ ನೋಡಿ ಪ್ರೈಮ್‌ ಎಂದು ಲೇಬಲ್‌ ಹಚ್ಚಬೇಡಿ. ಮಹಿಳೆಯ ಶಕ್ತಿ, ಜ್ಞಾನ, ತಿಳಿವಳಿಕೆ, ಖುಷಿ, ಕೆಲಸ ಎಲ್ಲವೂ ಅವಳ ಪ್ರೈಮ್‌. ಕಟ್ರೀನಾ ಈಗಲೂ ಅವರ ಪ್ರೈಮ್‌ನಲ್ಲಿ ಇದ್ದಾರೆ. ಅವರಷ್ಟೇ ಅಲ್ಲ, ನಾನು ಹಾಕಿರುವ ಈ ಪೋಸ್ಟ್‌ನ್ನು ಓದುತ್ತಿರುವ ಪ್ರತೀ ಮಹಿಳೆಯೂ ಪ್ರೈಮ್‌ನಲ್ಲೇ ಇದ್ದಾರೆ. ಹುಟ್ಟಿನಿಂದ ಸಾಯುವ ದಿನದವರೆಗೂ ಹೆಣ್ಣುಮಕ್ಕಳಿಗೆ ನಿತ್ಯವೂ ಪ್ರೈಮ್‌ ಎಂದು ಪೋಸ್ಟ್‌ ಮಾಡಿದ್ದಾರೆ.

ಬಾಡಿ ಶೇಪಿಂಗ್‌ ತಪ್ಪು, ಅಷ್ಟೆ! ಫುಲ್‌ಸ್ಟಾಪ್‌.

ಕಟ್ರೀನಾ ದೇಹದ ಬಗ್ಗೆ ಟೀಕೆ ಮಾಡ್ಕೊಂಡು ಟೈಮ್‌ ಪಾಸ್‌ ಮಾಡ್ತಿರುವವರು ಸ್ವಲ್ಪ ಕಾಮನ್‌ ಸೆನ್ಸ್‌ ಉಪಯೋಗಿಸಿ, ʼಕಟ್ರೀನಾ ಬಾಡಿ ಶೇಮಿಂಗ್‌ ಮಾಡ್ತಿದ್ದೀರಲ್ಲಾ ಆಕೆಯ ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಗೊತ್ತಾ?ʼ ಎಂದು ಜಸ್ಟಿಫೈ ಮಾಡಿಕೊಳ್ಳುವವರು ಕೇಳಿಸಿಕೊಳ್ಳಿ. ಯಾವುದೇ ಮಹಿಳೆ ಆಗಲಿ ಆಕೆಯ ಬ್ಯಾಂಕ್‌ ಅಕೌಂಟ್‌ನಲ್ಲಿ ಹತ್ತು ರೂಪಾಯಿ ಇರಲಿ, ಕೋಟಿಗಳೇ ಇರಲಿ. ಬಾಡಿ ಶೇಮಿಂಗ್‌ ಮಾಡೋದು ತಪ್ಪು. ಈಗಷ್ಟೇ ಮಗು ಆಗಿದೆ. ಅವರ ನ್ಯಾಚುರಲ್‌ ರಿದಮ್‌ ಎಂಜಾಯ್‌ ಮಾಡೋಕೆ ಬಿಡಿ. ಒಂದೇ ಒಂದು ಫಂಕ್ಷನ್‌ಗೆ ಬಂದು ಹೋದ ನಟಿಗೆ ಯಾಕಾದ್ರೂ ಜಗತ್ತಿಗೆ ಕಾಣಿಸಿಕೊಂಡೆನೋ ಎನ್ನುವಂತೆ ಮಾಡಬೇಡಿ. ಆಕೆ ಬಾಲಿವುಡ್‌ನ ಫಿಟ್ಟೆಸ್ಟ್‌ ನಟಿ ಆಗಿದ್ದವರು. ಬೇಕೆಂದಿದ್ದರೆ ಅದೇ ಸ್ಲಿಮ್‌ ದೇಹವನ್ನು ಮೇಂಟೇನ್‌ ಮಾಡಬಹುದಿತ್ತಲ್ವಾ? ಆಕೆ ತಾಯ್ತನವನ್ನು ಅನುಭವಿಸಿ ಖುಷಿ ಪಡ್ತಿದ್ದಾರೆ. ನೀವು ಅವರ ನೆಮ್ಮದಿ ಕೆಡಿಸಬೇಡಿ. ಯಾರನ್ನೂ ಬಾಡಿ ಶೇಮಿಂಗ್‌ ಮಾಡ್ಬೇಡಿ ಅಷ್ಟೆ! ಎಂದು ಪೋಸ್ಟ್‌ ಮಾಡಿದ್ದಾರೆ.

Must Read