ಹೊಸದಿಗಂತ ಡಿಜಿಟಲ್ ಡೆಸ್ಕ್:
2019ರಿಂದ ಇಲ್ಲೀವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ, ಅದಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡಿದ ವೆಚ್ಚ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಇಂದು ಉತ್ತರ ನೀಡಿದೆ.
ಈ ಕುರಿತು ಕೇಂದ್ರ ಸಚಿವ ವಿ ಮುರಳೀಧರನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, 2019ರಿಂದ ಇಲ್ಲೀವೆರಗೆ ಪ್ರಧಾನಿ ನರೇಂದ್ರ ಮೋದಿ 21 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ 22.76 ಕೋಟಿ ರೂಪಾಯಿ ಖರ್ಚು ಮಾಡಿದೆ.
ಭಾರತದ ರಾಷ್ಟ್ರಪತಿ 2019ರಿಂದ ಇಲ್ಲೀವರೆಗೆ(ರಾಮನಾಥ್ ಕೋವಿಂದ್ ಹಾಗೂ ದ್ರೌಪದಿ ಮುರ್ಮು) ಒಟ್ಟು 8 ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರ 6.24 ಕೋಟಿ ರೂಪಾಯಿ ಖರ್ಚು ಮಾಡಿದೆ.
ರಾಷ್ಟ್ರಪತಿಗಳ ವಿದೇಶಿ ಭೇಟಿಗೆ ಭಾರತ ಸರ್ಕಾರ 6,24,31,424 ರೂಪಾಯಿ ಖರ್ಚು ಮಾಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸಕ್ಕೆ 22,76,76,934 ರೂಪಾಯಿ ವೆಚ್ಚ ಮಾಡಲಾಗಿದೆ. ಇಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ 86 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕೆ 20,87,01,475 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಇನ್ನು 2019ರಿಂದ ಇಲ್ಲೀವರಗೆ ಪ್ರಧಾನಿ ಮೋದಿ ಜಪಾನ್‌ಗೆ 3 ಬಾರಿ ಪ್ರವಾಸ ಮಾಡಿದ್ದಾರೆ. ಅಮೆರಿಕ ಹಾಗೂ ಯುಎಇಗೆ ಎರಡೆರಡು ಬಾರಿ ಪ್ರವಾಸ ಮಾಡಿದ್ದಾರೆ.
2019ರಿಂದ ಇಲ್ಲೀವರೆಗೆ ರಾಷ್ಟ್ರಪತಿ ಒಟ್ಟು 8 ವಿದೇಶಿ ಪ್ರವಾಸ ಮಾಡಿದ್ದಾರೆ. ಇದರಲ್ಲಿ 7 ಪ್ರವಾಸ ಈ ಹಿಂದಿನ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಮಾಡಿದ್ದಾರೆ. ಇನ್ನು ದ್ರೌಪದಿ ಮುರ್ಮು ಯುಕೆ ಪ್ರವಾಸ ಕೈಗೊಂಡಿದ್ದಾರೆ. ಬ್ರಿಟನ್ ರಾಣಿ ನಿಧನ ವೇಳೆ ಕಳೆದ ಸೆಪ್ಟೆಂಬರ್‌ನಲ್ಲಿ ದ್ರೌಪದಿ ಮುರ್ಮು ಲಂಡನ್ ಪ್ರವಾಸ ಮಾಡಿದ್ದರು.
.