ಮೂಳೆ ಮುರಿದರೂ ಕರ್ತವ್ಯ ಮರೆಯದ ವಿಹಾರಿ: ಎಡಗೈ ಒಂದರಲ್ಲೇ ಮಾಡಿದ್ರು ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿ (Ranji Trophy 2023) ಯ ಪಂದ್ಯದ ವೇಳೆ ಆಂಧ್ರಪ್ರದೇಶ (Ranji Trophy 2023) ತಂಡದ ಕ್ಯಾಪ್ಟನ್ ಹನುಮ ವಿಹಾರಿ (Hanuma Vihari) ಬಲಗೈ ಮೂಳೆ ಮುರಿದರೂ (Fractured Hand) ಎರಡೂ ಇನ್ನಿಂಗ್ಸ್‌ಗಳಲ್ಲೂ ಎಡಗೈನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ನಡುವಿನ ಕ್ವಾರ್ಟರ್ ಫೈನಲ್ (Quarter-Final) ಪಂದ್ಯದ ಪ್ರಥಮ ಇನ್ನಿಂಗ್ಸ್ ವೇಳೆ ಮೂಳೆ ಮುರಿತಕ್ಕೆ ಒಳಗಾಗಿ ಕೈಗೆ ಪ್ಲಾಸ್ಟರ್ ಹಾಕಿದ್ದ ವಿಹಾರಿ ತಮ್ಮ ಬ್ಯಾಟಿಂಗ್ ಸರದಿ ಬಂದಾಗ ಬಲಗೈ ಬ್ಯಾಟರ್ ಎಡಗೈ ಒಂದರಲ್ಲೇ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು.

ಪ್ರಥಮ ಇನ್ನಿಂಗ್ಸ್‌ನಲ್ಲಿ 22 ರನ್ (57 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆಗಿದ್ದ ವಿವಾರಿ, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್ ಸಿಡಿಸಿ ತಂಡದ ಮೊತ್ತ 90ರ ಗಡಿದಾಟುವಂತೆ ನೋಡಿಕೊಂಡರು.
ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದನ್ನು ಕಂಡು ಕ್ರಿಕೆಟ್ ಪಂಡಿತರು ಸಹಿತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!