ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಲೀಪರ್ ಕೋಚ್‌ಗಳಲ್ಲಿ ಸಾಮಾನ್ಯವಾಗಿ ಒಂದು ಹೊದಿಕೆ ಹಾಗೂ ದಿಂಬುಗಳನ್ನು ಕಾಣುತ್ತೇವೆ. ಎಷ್ಟೋ ಮಂದಿ ಅದನ್ನೇ ಹೊದ್ದು ಮಲಗುತ್ತಾರೆ. ಇನ್ನು ಹಲವರು, ಅದನ್ನು ಹಾಸಿಕೊಂಡು ಮನೆಯಿಂದ ತಂದ ಬೆಡ್‌ಶೀಟ್‌ನ್ನು ಹೊದ್ದುಕೊಳ್ಳುತ್ತಾರೆ. ಅದಕ್ಕೂ ಮೀರಿದ ಕೆಲವರು ಮೊದಲು ರೈಲ್ವೆ ಕೊಟ್ಟ ಬೆಡ್‌ಶೀಟ್ ಹಾಸಿಕೊಂಡು, ಅದರ ಮೇಲೆ ಮನೆಯಿಂದ ತಂದ ಬೆಡ್‌ಶೀಟ್ ಹಾಕಿಕೊಂಡು ಮಲಗುತ್ತಾರೆ.
ಈ ಬೆಡ್‌ಶೀಟ್‌ಗಳನ್ನು ಯಾರು ತೊಳೆಯುತ್ತಾರೆ? ಎಷ್ಟು ದಿನಕ್ಕೊಮ್ಮೆ ತೊಳೆಯುತ್ತಾರೆ? ಈ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ರೈಲು ಪ್ರಯಾಣಿಕರಿಗೆ ಒದಗಿಸುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್‌ಶೀಟ್ ಅನ್ನು ಬೆಡ್‌ರೋಲ್ ಕಿಟ್‌ನಲ್ಲಿ ನೀಡಲಾಗುತ್ತದೆ. ಭಾರತೀಯ ರೈಲ್ವೆಯಲ್ಲಿ ಬಳಸುವ ಕಂಬಳಿಯಂತಹ ಹೊದಿಕೆಯು ಹಗುರವಾಗಿದ್ದು, ತೊಳೆಯಲು ಕೂಡ ಸುಲಭ ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇರುತ್ತದೆ, ಗುಣಮಟ್ಟದ ಯಂತ್ರಗಳ ಬಳಕೆ, ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿದಂತೆ ಪ್ರಯಾಣಿಕರ ಸುರಕ್ಷತೆ ಕಡೆಗೂ ಗಮನಹರಿಸಲಾಗುತ್ತದೆ ಎಂದು ಹೇಳಿದ್ದಾರೆ.