HEALTH | ಎಷ್ಟು ದಿನಕ್ಕೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುತ್ತೀರಾ? ವಾರಕ್ಕೊಮ್ಮೆ ಕ್ಲೀನ್ ಮಾಡದೇ ಹೋದ್ರೆ ಏನಾಗತ್ತೆ ನೋಡಿ..

ದಿನವೂ ಸ್ನಾನ ಮಾಡೋ ನಾವು ವಾರಕ್ಕೊಮ್ಮೆ ಸ್ನಾನ ಮಾಡಿದರೆ ಏನಾಗುತ್ತದೆ?
ಹಾಗೆಯೇ ನಮಗೆ ದಿನಕ್ಕೊಮ್ಮೆ ಸ್ನಾನ ಬೇಕಾದ ಹಾಗೆ ಟಾಯ್ಲೆಟ್,ಕಮೋಡ್‌ಗೆ ವಾರಕ್ಕೊಮ್ಮೆಯಾದರೂ ಸ್ನಾನ ಬೇಕು. ಇಲ್ಲವಾದರೆ ಇದರಲ್ಲಿ ಹಾನಿಮಾಡುವ ಬ್ಯಾಕ್ಟೀರಿಯಾ ಉತ್ಪಾದನೆಯಾಗಿ ನಮ್ಮ ಆರೋಗ್ಯ ಹಾಳು ಮಾಡುತ್ತವೆ.

  • ಮನೆ ಎಷ್ಟೇ ಶುಚಿಯಾಗಿರಬಹುದು ಆದರೆ ಟಾಯ್ಲೆಟ್ ರೂಂನಲ್ಲಿ ಶುಚಿತ್ವ ಇಲ್ಲದಿದ್ರೆ ಉಪಯೋಗ ಇಲ್ಲ. ವಾರಕ್ಕೊಮ್ಮೆ ತಪ್ಪದೇ ಟಾಯ್ಲೆಟ್ ಕ್ಲೀನರ್ ಬಳಸಿ ಕಮೋಡ್ ತೊಳೆಯಿರಿ
  • ಬರೀ ಸೋಪಿನ ನೀರು ಹಾಕಿ ಫ್ಲಶ್ ಮಾಡಿದರೆ ಸಾಲದು. ಟಾಯ್ಲೆಟ್ ಕ್ಲೀನರ್ ಹಾಕಿ, ಬ್ರಶ್‌ನಿಂದ ಚೆನ್ನಾಗಿ ಉಜ್ಜಬೇಕು.
  • ಕಮೋಡ್ ಟ್ಯಾಂಕ್ ಒಳಗೆ ಬ್ಲೂ ಟ್ಯಾಂಕ್ ಟ್ಯಾಬ್ಲೆಟ್ ಹಾಕಿ. ಇದರಿಂದ ಬ್ಯಾಕ್ಟೀರಿಯಾಗಳ ಉತ್ಪಾದನೆ ಕಡಿಮೆಯಾಗುತ್ತದೆ.
  • ಟಾಯ್ಲೆಟ್ ರೂಂನಿಂದ ಹೊರ ಬಂದ ನಂತರ ಸೋಪು ಹಾಕಿ ಕೈ ತೊಳೆಯದೇ ಹೋದರೆ ಬ್ಯಾಕ್ಟೀರಿಯಾದಿಂದ ಅನಾರೋಗ್ಯ ತಪ್ಪಿದ್ದಲ್ಲ.
  • ಟಾಯ್ಲೆಟ್ ರೂಂ ವಾರಕ್ಕೊಂದು ಬಾರಿ ಶುಚಿಗೊಳಿಸಿದರೂ ಅಲ್ಲಿ ಟೂತ್‌ಬ್ರಶ್ ಇಡಬೇಡಿ. ಇದರ ಮೇಲೆ ಬ್ಯಾಕ್ಟೀರಿಯಾ ಕೂರುತ್ತವೆ.
  • ಫ್ಲಶ್ ಮಾಡುವ ಮುನ್ನ ಟಾಯ್ಲೆಟ್ ಕ್ಯಾಪ್ ಹಾಕಿ ಫ್ಲಶ್ ಮಾಡಿ, ತೆಗೆದು ಫ್ಲಶ್ ಮಾಡಿದರೆ ಬ್ಯಾಕ್ಟೀರಿಯಾ ಹಾರಿ ಹೊರಬರುವ ಸಾಧ್ಯತೆ ಇದೆ.
  • ಬಾತ್‌ರೂಂ ಟೈಲ್ಸ್ ಕೂಡ ಆಗಾಗ ಶುಚಿಗೊಳಿಸಿ ಇಲ್ಲವಾದರೆ ಕಲೆ ಹಾಗೇ ಉಳಿದುಬಿಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!