ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಇಲಾಖೆ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚೆಗಷ್ಟೇ ಇಡ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವರದಿ ಬಂದಿತ್ತು. ಇದರ ಬೆನ್ನಲ್ಲೇ ಬಟಾಣಿ, ಕಲ್ಲಂಗಡಿ ಕೂಡ ಅಪಾಯ ಎಂದು ಹೇಳಿತ್ತು. ಈಗ ನಾವು ಕುಡಿಯುವ ಮಿನರಲ್ ಬಾಟಲ್ ನೀರು ಸೇಫಾ? ಎನ್ನುವ ಪ್ರಶ್ನೆ ಹುಟ್ಟಿದೆ.
ರಾಜ್ಯದಲ್ಲಿ ಮಿನಿರಲ್ ವಾಟರ್ ಬ್ರಾಂಡ್ ಹೆಸರು ಬಳಿಸಿಕೊಂಡು ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಆಹಾರ ಇಲಾಖೆ 288 ವಾಟರ್ ಬಾಟಲ್ ಗಳ ನೀರಿನ ಸ್ಯಾಂಪಲ್ ಪರೀಕ್ಷೆಗೆ ಮುಂದಾಗಿದ್ದು, ಈ ವಾರ ವರದಿ ಹೊರ ಬೀಳಲಿದೆ.
ಸ್ಪೇನ್‌ನ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ವಿಜ್ಞಾನಿಗಳು ಸಂಶೋಧನೆಯೊಂದನ್ನ ನಡೆಸಿದ್ದು, ನೀರಿನಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಾದಷ್ಟೂ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಈಗ ನಾವು ಕುಡಿಯುವ ನೀರು ಎಷ್ಟು ಸೇಫ್ ಎನ್ನುವುದನ್ನು ಕಾದು ನೋಡಬೇಕಿದೆ.