ಎನ್‌ಐಎ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಡುತ್ತಿದೆ ಗೊತ್ತಾ? ಅಮಿತ್‌ ಶಾ ನೀಡಿದ ವಿವರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ 13 ನೇ ಸಂಸ್ಥಾಪನಾ ದಿನಾಚರಣೆಯನ್ನು ಅಚರಿಸಿಕೊಳ್ಳುತ್ತಿದೆ. ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಎನ್‌ಐಎ ಪಾತ್ರ ಬಹುಮುಖ್ಯವಾದದ್ದು. ಈ ಸಂದರ್ಭದಲ್ಲಿ ಮಾತನಾಡಿರುವ ಗೃಹಸಚಿವ ಅಮಿತ್‌ ಶಾ ಎನ್‌ಐಎ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎನ್‌ಐಎ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಡುತ್ತಿದೆ ಎಂಬುದನ್ನು ಅವರು ಹೀಗೆ ವಿವರಿಸಿದ್ದಾರೆ.

• ಭಯೋತ್ಪಾದನೆಯ ವಿಷಯದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಒಂದು ಕಡೆಯಾದರೆ ಭಯೋತ್ಪಾದನೆಯನ್ನು ಬುಡ ಸಮೇತ ನಾಶಪಡಿಸುವುದು ಇನ್ನೊಂದು ಕಡೆ. ಅದನ್ನು ಸಾಧಿಸಲು ನಾವು ಮೊದಲು ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವವರನ್ನು ಮಟ್ಟ ಹಾಕಬೇಕು.

• ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ʼಫಂಡಿಂಗ್ʼ ಮಾಡುತ್ತಿದ್ದ ಹಲವು ಪ್ರಕರಣಗಳನ್ನು ಎನ್‌ಐಎ ದಾಖಲಿಸಿದೆ. ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಲ್ಲಿ ಇವು ಹೆಚ್ಚಿನ ಸಹಾಯ ಮಾಡಿದೆ ಜೊತೆಗೆ ಉಗ್ರರರಿಗೆ ಸುಲಭವಾಗಿ ಹಣ ಸಂದಾಯವಾಗುವುದನ್ನು ತಡೆಯಲಾಗಿದೆ.

• 2020-21 ರಲ್ಲಿ ಭಯೋತ್ಪಾದನಾ ಸಂಘಟನೆಗೆಳಿಗೆ ಸೇರಿದ ಹಲವು ʼಗ್ರೌಂಡ್‌ ಲೆವೆಲ್‌ʼ ಕೆಲಸಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಪ್ರಕರಣದಾಖಲಿಸಲಾಗಿದೆ ಮತ್ತು ಅನೇಕ ಸ್ಲೀಪರ್ ಸೆಲ್‌ಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ.

• ಇದರಿಂದಾಗಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸಾಗಣೆ ಮತ್ತು ಇತರೇ ವಸ್ತುಗಳ ಪೂರೈಕೆಗೆ ಭಾರಿ ಹೊಡೆತವುಂಟಾಗಿದೆ. ಸಾಮಾಜಿಕವಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಹಲವರನ್ನು ಬಂಧಿಸಿ ಕಾನೂನಿಗೆ ಒಪ್ಪಿಸಲಾಗಿದೆ.

• ಇದರ ಜೊತೆಗೆ ಮಾವೋವಾದಿಗಳಿಗೆ ಹಣಸಹಾಯ ಮಾಡುತ್ತಿರುವ ಹಲವು ಪ್ರಕರಣಗಳ ಕುರಿತು ತನಖೆ ನಡೆಸಲಾಗುತ್ತಿದೆ.
• ಇಲ್ಲಿಯವರೆಗ ಉಗ್ರರಿಗೆ ಹಣಸಹಾಯ ಮಾಡುವ ಒಟ್ಟು 105 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 876 ಆರೋಪಿಗಳನ್ನು ಒಳಗೊಂಡ 94 ಪ್ರಕರಣಗಳ ಚಾರ್ಜ್‌ಶೀಟ್ ಮಾಡಲಾಗಿದೆ. ಸುಮಾರು 100 ಆರೋಪಿಗಳಿಗೆ ಶಿಕ್ಷೆಯಾಗಿದೆ.

• ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು ಮಾದಕ ವಸ್ತುಗಳ ಸಾಗಣೆ, ನಕಲಿನೋಟು ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಹವಾಲಾ ದಂಧೆ,ಬಾಂಬ್‌ ಸ್ಫೋಟ ಗಳಂತಹ ವಿಷಯಗಳ ಕುರಿತಾಗಿ ಡೇಟಾ ಬೇಸ್‌ ನಿರ್ಮಿಸಲಾಗುತ್ತಿದೆ.

• ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸಿ ಈ ಡೇಟಾಬೇಸ್‌ ಅನ್ನು ಇನ್ನಷ್ಟು ಬಲಪಡಿಸಿ ದೇಶದ ಅಂತರಿಕ ಸುರಕ್ಷತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ.

• ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಸೇರಿಸಿಕೊಳ್ಳುತ್ತಿರುವ ಕುರಿತು ನಿಗಾವಹಿಸಲಾಗುತ್ತಿದೆ.

• ಸಂಸ್ಥೆಯು ಪ್ರಾರಂಭವಾದಾಗಿನಿಂದ ಸುಮಾರು 400 ಪ್ರಕರಣಗಳನ್ನು ದಾಖಲಿಸಿದೆ. 349 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2,494 ಜನರನ್ನು ಬಂಧಿಸಲಾಗಿದೆ, ಅದರಲ್ಲಿ 391 ಜನರನ್ನು ಅಪರಾಧಿಗಳೆಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!