ಮಳೆಗಾಲದಲ್ಲಿ ಬರುವ ಈ ಫಂಗಲ್ ಇನ್ಫೆಕ್ಷನ್ ಸಾಕಷ್ಟು ತೊಂದರೆ ನೀಡುತ್ತದೆ. ಸರಿಯಾಗಿ ಯಾವ ಕೆಲಸದ ಮೇಲೂ ಏಕಾಗ್ರತೆ ಇಟ್ಟು ಕೆಲಸ ಮಾಡದಂತೆ ಆಗುತ್ತದೆ. ಸ್ಕಿನ್ ಇನಫೆಕ್ಷನ್ಸ್ ಒಂದು ಬಾರಿ ಬಂದರೆ ಹೋಗೋದು ನಿಧಾನ, ಸ್ಕಿನ್ ಇನ್ಫೆಕ್ಷನ್ಸ್ ಬಾರದಂತೆ ಅಥವಾ ಬಂದರೆ ಬೇಗ ಹೋಗಬೇಕೆಂದರೆ ಈ ವಿಧಾನ ಅನುಸರಿಸಿ..
ನಿಮ್ಮ ಚರ್ಮವನ್ನು ಸದಾ ಶುಚಿಯಾಗಿ ಹಾಗೂ ಡ್ರೈ ಆಗಿ ಇಟ್ಟುಕೊಳ್ಳಿ
ಯಾವಾಗಲೂ ಒಣಗಿರುವ ಶುದ್ಧವಾದ ಒಳಉಡುಪುಗಳು ಆಗೂ ಸಾಕ್ಸ್‌ನ್ನು ಧರಿಸಿ
ಹೆಚ್ಚು ನೀರು ಹಾಗೂ ಬ್ಯಾಲೆನ್ಸ್ ಆದ ಡಯಟ್ ಮಾಡಿ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಿ
ಯಾವುದೇ ಇನ್ಫೆಕ್ಷನ್ ಆಗಿದ್ದರೆ ಆ ಜಾಗವನ್ನು ಸೋಪ್ ಹಾಕಿ ತೊಳೆದು, ಚರ್ಮ ಡ್ರೈ ಆದ ನಂತರ ಕ್ರೀಂ ಅಥವಾ ಪೌಡರ್ ಹಚ್ಚಿ.
ವೈದ್ಯರು ನೀಡಿರುವ ಸಲಹೆಗಳನ್ನು ಸರಿಯಾಗಿ ಪಾಲಿಸಿ
ನಿಮ್ಮ ಬಟ್ಟೆಯನ್ನು ಬೇರೆಯವರಿಗೆ ಕೊಡುವುದು, ಬೇರೆಯವರ ಬಟ್ಟೆಗಳನ್ನು ಹಾಕುವ ಅಭ್ಯಾಸ ಬಿಟ್ಟುಬಿಡಿ
ಟೈಟ್ ಆದ ಅಥವಾ ಕಿರಿಕಿರಿ ಆಗುವಂಥ ಬಟ್ಟೆಗಳನ್ನು ಹಾಕಬೇಡಿ
ಯಾವ ಜಾಗದಲ್ಲಿ ಇನ್ಫೆಕ್ಷನ್ ಆಗಿದೆಯೋ ಆ ಜಾಗದಲ್ಲಿ ಕಡಿತ ಉಂಟಾಗುತ್ತದೆ, ಆದರೆ ತಕೆರೆದುಕೊಳ್ಳಬೇಡಿ
ಪ್ರಾಣಿಗಳ ಜೊತೆ ಆಟ ಆಡಿದ ನಂತರ ಮೈ ಕೈ ತೊಳೆದುಕೊಳ್ಳಿ
ಸಿಕ್ಕಿದ ಕ್ರೀಂ ಹಚ್ಚೋದು, ಮಾತ್ರೆ ಕುಡಿಯುವ ಅಭ್ಯಾಸ ಬಿಡಿ, ವೈದ್ಯರ ಸಲಹೆ ಪಡೆಯಿರಿ