ಎಷ್ಟೋ ಜನರಿಗೆ ಸಹಾಯ ಪಡೆಯೋದು ಗೊತ್ತಿರುತ್ತದೆ. ಆದರೆ ಕೃತಜ್ಞರಾಗಿರೋದು ಗೊತ್ತಿರೋದಿಲ್ಲ. ಈ ಪ್ರಾಕ್ಟೀಸ್‌ನಿಂದ ಜೀವನ ನಿಂತಲ್ಲೇ ನಿಲ್ಲುತ್ತದೆ. ಅದೇ ಜೀವನಕ್ಕೆ ಕೃತಜ್ಞರಾಗಿರಿ, ಜೀವನ ಸಂತಸದಿಂದ ಮುಂದುವರಿಯುತ್ತದೆ.
ಗ್ರಾಟಿಟ್ಯೂಟ್ ಪ್ರಾಕ್ಟೀಸ್ ಮಾಡೋದು ಹೇಗೆ?
ಒಂದು ಡೈರಿ ಇಟ್ಟುಕೊಳ್ಳಿ. ಇದರಲ್ಲಿ ಪ್ರತೀದಿನ ನೀವು ಯಾವುದಕ್ಕೆಲ್ಲಾ ಕೃತಜ್ಞರಾಗಿದ್ದೀರಿ ಎಂದು ಬರೆಯಲು ಆರಂಭಿಸಿ.
ನಿಮ್ಮ ಸುತ್ತಮುತ್ತಲೇ ಇರುವ ಪ್ರೀತಿಪಾತ್ರರು ನಿಮಗಾಗಿ ಮಾಡುವ ಕೆಲಸಗಳಿಗೆ ಧನ್ಯವಾದ ಹೇಳಿ. ಅವರ ಪ್ರೀತಿಯನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳಬೇಡಿ.
ಗ್ರಾಟಿಟ್ಯೂಡ್ ಮೆಡಿಟೇಷನ್ ಅಭ್ಯಾಸ ಮಾಡಿಕೊಳ್ಳಿ. ಮೊದಲು ಇಂದು ಜೀವಂತವಾಗಿರುವುದಕ್ಕೆ ಧನ್ಯವಾದ ಹೇಳಿ.
ಯಾವಾಗಲೂ ಜೀವನದಿಂದ ಬರೀ ಪಡೆದುಕೊಳ್ಳಬೇಡಿ. ಜೀವನಕ್ಕೆ ಏನಾದ್ರೂ ಕೊಡಿ. ಸಾಮಾಜಿಕ ಕೆಲಸಗಳನ್ನು ಮಾಡಿ. ದಿನವೂ ಒಬ್ಬರಿಗಾದ್ರೂ ಸಹಾಯ ಮಾಡಿ.