ನಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎಷ್ಟು ಸುಲಭವಾಗಿ ಕ್ಷಮಿಸಿಬಿಡುತ್ತೇವೆ. ಆದರೆ ಬೇರೆಯವರ ತಪ್ಪನ್ನು ಕ್ಷಮಿಸುವುದು ಕಷ್ಟದ ಕೆಲಸ. ಕಷ್ಟ ಏನು ಸಾಧ್ಯ ಆಗೋದೇ ಇಲ್ಲ. ಅದರಲ್ಲೂ ನಮಗೆ ಕೋಪ ಬರೋದು ಇಬ್ಬರ ಮೇಲೆ ಮಾತ್ರ ಒಂದು ಏನೂ ಪರಿಚಯ ಇಲ್ಲದ, ಹೀಗೆ ಬಂದು ಹಾಗೆ ಹೋಗುವ ವ್ಯಕ್ತಿಗಳು ಇನ್ನೊಂದು ನಮ್ಮ ಪ್ರೀತಿ ಪಾತ್ರರು. ಕೆಲವೊಮ್ಮೆ ಕ್ಷಮಿಸಬೇಕು ಎನಿಸಿದ್ರೂ ಕ್ಷಮಿಸಲಾರದಷ್ಟು ದೂರಕ್ಕೆ ಮನಸ್ಥಿತಿ ಹೋಗಿಬಿಟ್ಟಿರುತ್ತದೆ. ಸಿಟ್ಟು ಮಾಡದೇ ಜನರನ್ನು ಕ್ಷಮಿಸುವುದು ಹೇಗೆ? ಇವು ನಿಮಗೆ ಸಹಾಯ ಆಗಬಹುದು..
ಸಿಟ್ಟುಮಾಡಿಕೊಳ್ಳಿ, ರೇಗಿ, ಕೂಗಾಡಿ, ಅತ್ತುಬಿಡಿ. ಮನಸ್ಸಿನಲ್ಲೇ ಇಟ್ಟುಕೊಂಡಷ್ಟು ದೊಡ್ಡದಾಗುವ ಸಾಧ್ಯತೆ ಇದೆ. ಅಲ್ಲಿನದು ಅಲ್ಲಿಯೇ ಮುಗಿಸಿ ಬಿಡಿ.
ನಿಮ್ಮ ಕೋಪದಿಂದ ಏನಾದರೂ ಪ್ರಯೋಜನ ಇದೆಯಾ? ಇದು ನಿಮ್ಮ ಬೆಳವಣಿಗೆಗೆ ಪೂರಕವೋ ಮಾರಕವೋ ಒಂದು ಕ್ಷಣ ಆಲೋಚಿಸಿ
ಈಗ ನಾನು ಎಲ್ಲವನ್ನು ಒಪ್ಪಿಕೊಂಡರೆ ಮತ್ತದೇ ಮರುಕಳಿಸುತ್ತದೆ ಎನ್ನುವ ಭಾವನೆ ಇದ್ದರೆ, ಅದನ್ನು ಪಕ್ಕಕ್ಕಿಟ್ಟು ಎದುರಿನ ವ್ಯಕ್ತಿಗೆ ನಿಮ್ಮ ಭಾವನೆ ಅರ್ಥ ಮಾಡಿಸಿ.
ಅವರನ್ನು ಕ್ಷಮಿಸಲು ನೀವು ಅವರ ಜಾಗದಲ್ಲಿ ನಿಂತು ಯೋಚಿಸಿ. ಅವರೇಕೆ ಹಾಗೆ ಮಾಡಿದ್ದರು, ನೀವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ಹೀಗೆ ಆಲೋಚಿಸಿ
ಈ ವ್ಯಕ್ತಿ ಜೀವನದಲ್ಲಿ ನಿಮಗೆ ಬೇಕಾ? ಇವರು ಬೇಕು ಎಂದಾದರೆ ಅರ್ಥ ಮಾಡಿಕೊಳ್ಳಲು ಯತ್ನಿಸಿ, ಬೇಡ ಎಂದರೆ ಮನಸ್ಸಿನಲ್ಲಿ ಇರುವುದನ್ನು ಹೇಳಿ ಬಿಟ್ಟುಬಿಡಿ.
ಯಾರಾಗಲಿ, ಏನೇ ಆಗಲಿ ನಿಮ್ಮ ಸುತ್ತ ಒಂದು ಬೌಂಡರಿ ಇರಲಿ. ಈ ಒಳಜಗತ್ತಿಗೆ ಯಾರೂ ಬಾರದಿರಲಿ.
ನಿಮಗಿರುವ ಕೋಪ, ನಿಮ್ಮ ಕಥೆ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿದೆ, ನಿಮ್ಮ ಒಂದು ಮಾತಿಂದ ಮುಂದೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ
ನಿಮ್ಮ ಸ್ಟೋರಿಗೆ ನೀವೇ ಹೀರೋ ಆಗಬೇಕು. ಕ್ಷಮಿಸಿದವರೇ ದೊಡ್ಡವರು ನೆನಪಿರಲಿ.