ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ನಂತರ ಹೊಟ್ಟೆಯ ಸುತ್ತ ಸ್ಟ್ರೆಚ್ ಮಾರ್ಕ್ಸ್ ಸಾಮಾನ್ಯವಾಗಿ ಕಂಡುಬರುತ್ತದೆ. ಚರ್ಮವು ಹಿಗ್ಗುವುದರಿಂದ ಹೆರಿಗೆಯಾದವರಲ್ಲಿ ಮಾತ್ರವಲ್ಲ, ತೂಕ ಹಾಗೂ ಕೆಲಸದ ಒತ್ತಡದಲ್ಲಿನ ಏರಿಳಿತಗಳಿಂದಲೂ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತವೆ. ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಒಂದು ಕಪ್ ಸಕ್ಕರೆಗೆ ಕಾಲು ಕಪ್ ಆಲಿವ್ ಎಣ್ಣೆ ಹಾಗೂ ಕೆಲವು ಹನಿ ನಿಂಬೆ ರಸ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಬೇಕಾಗುತ್ತದೆ. ಸ್ವಲ್ಪ ಸಮಯದ ಬಳಿಕ, ಅದನ್ನು ಉಜ್ಜಿ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಲು ತಜ್ಞರು ಸಲಹೆ ನೀಡುತ್ತಾರೆ.
ಅಲೋವೆರಾ ಸ್ಟ್ರೆಚ್ ಮಾರ್ಕ್ಸ್ ತೆಗೆದುಹಾಕುವಲ್ಲಿ ಉಪಯುಕ್ತವಾಗಿದೆ. ಇದಕ್ಕಾಗಿ ಸ್ವಲ್ಪ ಅಲೋವೆರಾ ತಿರುಳು, ತೆಂಗಿನ ಎಣ್ಣೆಯನ್ನು ಬೆರೆಸಿ, ಪ್ರತಿದಿನ ಹೊಟ್ಟೆಗೆ ಹಚ್ಚಿ ತೊಳೆದುಕೊಳ್ಳಬೇಕಾಗುತ್ತದೆ. ವಾರಕ್ಕೆ ಎರಡು ಬಾರಿ ಇದನ್ನು ಟ್ರೈ ಮಾಡಬೇಕಾಗುತ್ತದೆ. ಆದರೂ ಕೂಡ ಸಮಸ್ಯೆಗೆ ಪರಿಹಾರ ಲಭಿಸದಿದ್ದರೆ ವೈದ್ಯರನ್ನು ಸಂಪರ್ಕಿಸಿ ಎಂದು ಸೌಂದರ್ಯಶಾಸ್ತ್ರಜ್ಞೆ ಡಾ.ಶೈಲಜಾ ಸುರಪಾನೆ ತಿಳಿಸುತ್ತಾರೆ.