ಮಕ್ಕಳಿಗೆ ಬಣ್ಣಗಳನ್ನು ಪರಿಚಯಿಸೋದು ಹೇಗೆ? ಈ ಸಿಂಪಲ್ ವಿಧಾನ ಅನುಸರಿಸಿ..

ಈಗಿನ್ನೂ ತೊದಲೋಕೆ ಶುರು ಮಾಡಿದ ಮಕ್ಕಳೆಲ್ಲ ನಿನಗೆ ಯಾವ ಬಣ್ಣ ಇಷ್ಟ ಎಂದರೆ ಆಲೀವ್ ಗ್ರೀನ್ , ಸ್ವಾನ್ ವೈಟ್, ಬೀಜ್ ಎಂದೆಲ್ಲಾ ಹೇಳುತ್ತಾರೆ‌. ಇವರ ವಯಸ್ಸಿನಲ್ಲಿ ನಮಗೆ ಕೆಂಪು ನೀಲಿ ಬಣ್ಣ ಗೊತ್ತಿತ್ತು, ಸ್ಕೈ ಬ್ಲೂ ಯಾವುದು ಎಂದು ಕೇಳಿದರೆ ಅಮ್ಮನ ಕಡೆ ಮುಖ ಮಾಡುತ್ತಿದ್ದೆವು. ಈಗಿನ ಮಕ್ಕಳು ಇಷ್ಟೆಲ್ಲಾ ಕಲಿಯೋದು ಹೇಗೆ? ಮಕ್ಕಳಿಗೆ ಬಣ್ಣಗಳನ್ನು ಹೇಗೆ ಪರಿಚಯಿಸಬೇಕು? ಇಲ್ಲಿದೆ ಸಿಂಪಲ್ ಸ್ಟೆಪ್ಸ್..

  • ಸಿಂಪಲ್ ಆಗಿರಲಿ, ಒಟ್ಟಿಗೇ ಮನೆಯಲ್ಲ ಬಣ್ಣ ಮಾಡಿಡಬೇಡಿ. ಮೊದಲು ಸಣ್ಣ ಸ್ಟೆಪ್ಸ್‌ನಿಂದ ಕಲಿಕೆ ಆರಂಭವಾಗಲಿ.
  • ಮೊದಲು ಎರಡು ಬಣ್ಣ ಪರಿಚಯಿಸಿ, ಆ ಬಣ್ಣದಲ್ಲಿ ಮನೆಯಲ್ಲಿ ಏನೆಲ್ಲಾ ಇದೆ ತೋರಿಸುತ್ತಾ ಬನ್ನಿ. ಅದನ್ನು ಕಲಿತ ನಂತರ ಬೇರೆ ಬಣ್ಣ ಕಲಿಸಿ.
  • ಸಣ್ಣ ಹಾಗೂ ಬಣ್ಣಬಣ್ಣದ ವಸ್ತುಗಳನ್ನು ಮಕ್ಕಳ ಕೈಗೆ ಕೊಡಿ, ಬೇರೆ ಬಣ್ಣದ ವಸ್ತುಗಳನ್ನು ಬೇರೆ ಬೇರೆ ಮಾಡಿ ಎಂದು ಹೇಳಿ.
  • ಪಿಂಕ್, ಪೀಚ್ ಈ ರೀತಿ ಹತ್ತಿರದ ಬಣ್ಣಗಳನ್ನು ಮೊದಲು ಪರಿಚಯಿಸಬೇಡಿ. ಎರಡು ವಿರುದ್ಧ ಬಣ್ಣಗಳನ್ನು ಆರಿಸಿ, ನೀಲಿ ಹಾಗೂ ಕೆಂಪು ಈ ರೀತಿ.
  • ಬಣ್ಣದ ಪಝಲ್‌ಗಳಲ್ಲಿ ಕಲಿಸುವುದು ಸುಲಭ, ಪ್ರತಿ ಬಾರಿ ಬಣ್ಣದ ಹೆಸರು ಹೇಳಿ ಕಲಿಸುತ್ತಾ ಹೋಗಿ
  • ಬಣ್ಣದ ವಸ್ತುಗಳ ಉದಾಹರಣೆ ನೀಡುವಾಗ ನಿಮ್ಮ ಕೈಗೆಟುವ ವಸ್ತುಗಳ ಉದಾಹರಣೆ ನೀಡಿ, ಕಾಗೆ ಕಪ್ಪು ಎಂದು ಹೇಳುವ ಬದಲು ಅಲ್ಲೇ ಇರುವ ಕಪ್ಪು ರಿಮೋಟ್ ತೋರಿಸಿ.
  • ಮಕ್ಕಳ ಆಟಸಾಮಾನುಗಳಿಗೆ ಬಣ್ಣಗಳ ಹೆಸರಿಡಿ, ಕಪ್ಪು ಕರಡಿ, ಬೂದು ನರಿ, ಪಿಂಕ್ ಗೊಂಬೆ, ಹಸಿರು ಬ್ಯಾಟ್ ಹೀಗೆ. ಇದರಿಂದ ಪದಗಳನ್ನು ಬೇಗ ಕಲಿಯುತ್ತಾರೆ.
  • ಮಕ್ಕಳ ಜೊತೆ ಕುಳಿತು ಪೇಂಟ್ ಮಾಡಿ, ಎರಡೇ ಬಣ್ಣ ನೀಡಿ ಬಣ್ಣ ಬಳಿಯಲು ಹೇಳಿ.
  • ವಾತಾವರಣದಲ್ಲಿ, ಮನೆಯಿಂದ ಹೊರಗೆ ಬಂದಾಗಲೂ ಬಣ್ಣಗಳನ್ನು ತೋರಿಸಿ, ಹಸಿರು ಗಿಡಮರ, ಹೊರಡುವಾಗ ಬಟ್ಟೆಗಳ ಬಣ್ಣ ಹೆಸರಿಸಿ
  • ಆರ್ಗಾನಿಕ್ ಬಣ್ಣಗಳನ್ನು ತಂದು ಮಕ್ಕಳಿಗೆ ಪೇಂಟ್ ಮಾಡಲು ಹೇಳಿ. ಕೈಯಿಂದ ಅವರು ಬಣ್ಣವನ್ನು ಮುಟ್ಟಿ, ಪೇಪರ್ ಮೇಲೆ ಹಚ್ಚಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!