ಒಂದು ಕಪ್ ಕಾಬೂಲ್ ನೀರಿನಲ್ಲಿ ಚೆನ್ನಾಗಿ ನೆನೆಸಿ. ನೆನೆದ ಕಾಬೂಲನ್ನು ತೊಳೆದು ಮೂರು ಕಪ್ ನೀರು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಐದರಿಂದ ಆರು ವಿಶಿಲ್ ಸರಿಯಾಗಿ ಬರಲಿ. ದೊಡ್ಡ ಗಾತ್ರದ ಈರುಳ್ಳಿ, ಅದೇ ಗಾತ್ರದ ಟೊಮೆಟೋ, ಸ್ವಲ್ಪ ಕೊತ್ತೊಂಬರಿ ಸೊಪ್ಪು ಚೆನ್ನಾಗಿ ತೊಳೆದು ಸಣ್ಣದಾಗಿ ಒಂದೇ ಪಾತ್ರೆಯಲ್ಲಿ ಹೆಚ್ಚಿಟ್ಟುಕೊಳ್ಳಿ. ಪನ್ನೀರ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ.
ಹತ್ತರಿಂದ ಹದಿನೈದು ಎಸಳು ಬೆಳ್ಳುಳ್ಳಿ, ಅರ್ಧ ಟೀ ಸ್ಪೂನ್ ಜೀರಿಗೆ, ಗೋಡಂಬಿ ಸ್ವಲ್ಪ, ಒಂದು ಕಪ್ ತೆಂಗಿನಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಕಾಯಿಮೆಣಸು ಇವಿಷ್ಟನ್ನು ಸಣ್ಣ ಉರಿಯಲ್ಲಿ ಫ್ರೈಮಾಡಿ, ಮಿಕ್ಸಿ ಜಾರಿಗೆ ಹಾಕಿ ರುಬ್ಬಿ.
ಒಂದು ಬಾಣೆಲೆಯಲ್ಲಿ ಐದು ಟೀ ಸ್ಪೂನ್ ತೆಂಗಿನೆಣ್ಣೆ ಹಾಕಿ ಬಿಸಿಮಾಡಿ. ಅದರಲ್ಲಿ ಕತ್ತರಿಸಿ ಪನೀರ್ ಹಾಕಿ ಫ್ರೈಮಾಡಿ ಎತ್ತಿಡಿ. ಅದೇ ಬಾಣಲೆಗೆ ಸಾಸಿವೆ, ಜೀರಿಗೆ, ಶುಂಠಿಪೇಸ್ಟ್ ಹಾಕಿ ಚೆನ್ನಾಗ್ ಮಿಶ್ರಮಾಡಿ. ಕತ್ತರಿಸಿಟ್ಟ ಈರುಳ್ಳಿ ಹಾಗೂ ಟೊಮೆಟೋ ಹಾಕಿ ಬೇಯಿಸಿ. ಬೇಯುತ್ತಿದ್ದಂತೆಯೇ ಕುಕ್ಕರಿನಲ್ಲಿದ್ದ ಕಾಬೂಲ್ ಅನ್ನು ನೀರು ಸಹಿತ ಸೇರಿಸಿ. ಒಂದು ಟೀ ಸ್ಪೂನ್ ಖಾರದ ಪುಡಿ, ಧನಿಯಾಪುಡಿ , ಸ್ವಲ್ಪ ಅರಶಿನ ಪುಡಿ, ಗರಂ ಮಸಾಲಾ ಸೇರಿಸಿ ಸರಿಯಾಗಿ ಮಿಶ್ರಮಾಡಿಕೊಳ್ಳಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ. ಫ್ರೈಮಾಡಿ ಎತ್ತಿಟ್ಟುಕೊಂಡ ಪನೀರ್ ಸೇರಿಸಿ . ಪೂರಿ , ಚಪಾತಿಯ ಜೊತೆಗೆ ಇದು ಬಹಳ ರುಚಿಯಾಗಿರುತ್ತದೆ.