ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿ ಬಿಸಿ ಕಾಶಿಹಲ್ವಾ ಸವಿಯೋದೇ ಒಂದು ವಿಭಿನ್ನ ಅನುಭವ. ರುಚಿ ರುಚಿಯ ಹಲ್ವ ಯಾರು ತಾನೇ ಇಷ್ಟ ಪಡೋದಿಲ್ಲ? ಪ್ರತಿಯೊಂದು ವಯೋಮಾನದವರೂ ಇಷ್ಟಪಟ್ಟು ತಿನ್ನುವ ಕಾಶೀ ಹಲ್ವ ಹೀಗೆ ಮಾಡಿದ್ರೆ ಇನ್ನಷ್ಟು ಟೇಸ್ಟಿಯಾಗಿರುತ್ತೆ.
ಬೇಕಾಗುವ ಸಾಮಾಗ್ರಿ: ಬೂದು ಕುಂಬಳಕಾಯಿ, ತೆಂಗಿನಕಾಯಿ, ದೇಸೀ ದನದ ತುಪ್ಪ, ಒಂದು ಕಪ್ ಸಕ್ಕರೆ, ಗೋಡಂಬಿ, ದ್ರಾಕ್ಷಿ, ಬಾದಾಮಿ, ರಂಗಿನ ಹುಡಿ.
ಮಾಡುವ ವಿಧಾನ:
ಕುಂಬಳಕಾಯಿಯ ಸಿಪ್ಪೆ ತೆಗೆದು, ತಿರುಳು ತೆಗೆದು ತುರಿದಿಟ್ಟುಕೊಳ್ಳಿ. ಪಾನ್‌ನಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಬಾದಾಮಿ ಫ್ರೈ ಮಾಡಿ ಪ್ರತ್ಯೇಕ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ತುರಿದಿಟ್ಟ ಬೂದು ಕುಂಬಳವನ್ನು ಹಾಕಿ ಹತ್ತು ನಿಮಿಷಗಳ ಕಾಲ ಫ್ರೈ ಮಾಡಿ. ಸಕ್ಕರೆ ಸೇರಿಸಿ ಕಾಯಿಸಿ. ತುಪ್ಪ ಸೇರಿಸಿ ಗೊಟಾಯಿಸಿ. ಚಿಟಿಕಿ ರಂಗಿನ ಹುಡಿ ಸೇರಿಸ್ ಮಿಶ್ರಮಾಡಿ. ಪಾಕ ತಳಬಿಟ್ಟ ನಂತರ ಪ್ರತ್ಯೇಕವಾಗಿಟ್ಟುಕೊಂಡ ಗೋಡಂಬಿ, ದ್ರಾಕ್ಷಿ, ಬಾದಾಮಿ ಚೂರುಗಳನ್ನು ಸೇರಿಸಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ ಮಿಶ್ರಮಾಡಿ. ಬಿಸಿ ಬಿಸಿಯಾದ ಕಾಶೀ ಹಲ್ವ ಸವಿಯೋದು ಭಾರೀ ಮಜಾ…