ಸಾಮಾಗ್ರಿಗಳು
ಚೈನೀಸ್ ಎಲೆಕೋಸು – 1 ಕೆಜಿ
ಕ್ಯಾರೆಟ್ – 1
ಮೂಲಂಗಿ – 1
ಉಪ್ಪು – 3 ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 8 ಟೀಸ್ಪೂನ್
ಬೆಳ್ಳುಳ್ಳಿ – 4 ಟೀಸ್ಪೂನ್
ಪ್ಲಮ್ ಸಾರ – 4 ಟೀಸ್ಪೂನ್
ಕಂದು ಸಕ್ಕರೆ – 3 ಟೀಸ್ಪೂನ್
ಫಿಶ್ ಸಾಸ್ – 8 ಟೀಸ್ಪೂನ್
ಎಳ್ಳು – 1 ಟೀಸ್ಪೂನ್
ಎಳ್ಳಿನ ಎಣ್ಣೆ – 1 ಟೀಸ್ಪೂನ್
ಮಾಡುವ ವಿಧಾನ
ಮೊದಲಿಗೆ ಎಲೆಕೋಸನ್ನು ಸ್ವಚ್ಛಗೊಳಿಸಿ, 4 ಅಥವಾ ಮಧ್ಯಮ ಗಾತ್ರದ ಭಾಗಗಳಾಗಿ ಕತ್ತರಿಸಿ.
ಕ್ಯಾರೆಟ್ ಹಾಗೂ ಮೂಲಂಗಿ ಸಿಪ್ಪೆ ತೆಗೆದು ತೆಳ್ಳಗಿನ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.
ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಕೈಗಳಿಂದ ಚೆನ್ನಾಗಿ ಹರಡಿಕೊಳ್ಳಿ.
ನಂತರ ಅದಕ್ಕೆ 30 ನಿಮಿಷ ವಿಶ್ರಾಂತಿ ನೀಡಿ. ಬಳಿಕ ಅದರಲ್ಲಿರುವ ಹೆಚ್ಚಿನ ನೀರಿನಂಶವನ್ನು ತೆಗೆದುಹಾಕಲು 3-4 ಬಾರಿ ತೊಳೆಯಿರಿ.
ಒಂದು ಬೌಲ್‌ನಲ್ಲಿ ಚಿಲ್ಲಿ ಫ್ಲೇಕ್ಸ್, ಕೊಚ್ಚಿದ ಬೆಳ್ಳುಳ್ಳಿ, ಫಿಶ್ ಸಾಸ್, ಪ್ಲಮ್ ಸಾರ ಮತ್ತು ಸಕ್ಕರೆಯನ್ನು ಹಾಕಿ ಪೇಸ್ಟ್ ಆಗಿ ಮಿಶ್ರಣ ಮಾಡಿ.
ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಹಾಕಿ, ತಯಾರಿಸಿಟ್ಟ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
ಗಟ್ಟಿ ಮುಚ್ಚಳವಿರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ, ಹುದುಗಲು ಬಿಡಿ.
ಇದೀಗ ಕೊರಿಯನ್ ಕಿಮ್ಚಿ ತಯಾರಾಗಿದ್ದು, 2 ದಿನಗಳ ನಂತರ ಎಳ್ಳು ಹಾಗೂ ಎಳ್ಳಿನ ಎಣ್ಣೆ ಸೇರಿಸಿ ಅನ್ನ ಅಥವಾ ಊಟದೊಂದಿಗೆ ಸವಿಯಿರಿ. ಇದನ್ನು 2 ವಾರಗಳ ವರೆಗೆ ಇಡಬಹುದು. ಇದರ ಫ್ರೈಡ್ ರೈಸ್ ಹಾಗೂ ನೂಡಲ್ಸ್ ಕೂಡ ಫೇಮಸ್ ಖಾದ್ಯಗಳಾಗಿವೆ.