ಸಾಮಾಗ್ರಿಗಳು
ಅಕ್ಕಿ
ಉಪ್ಪು
ಅವಲಕ್ಕಿ
ಸೋಡಾ
ಉಪ್ಪು
ಆಲೂಗಡ್ಡೆ
ಈರುಳ್ಳಿ
ಉಪ್ಪು
ಹಸಿಮೆಣಸು
ಮಾಡುವ ವಿಧಾನ
ದೋಸೆಗೆ ಹಿಂದಿನ ದಿನವೇ ಅಕ್ಕಿ ನೆನೆಸಿಟ್ಟು, ರುಬ್ಬುವಾಗ ಅಕ್ಕಿ ಜೊತೆ ನೆನೆಸಿದ ಅವಲಕ್ಕಿ, ಉಪ್ಪು ಹಾಕಿ ರುಬ್ಬಿಕೊಳ್ಳಿ ಫರ್ಮೆಂಟ್ ಆಗಲು ಸೋಡಾ ಹಾಕಿ ಬಿಡಿ
ಇಲ್ಲವೇ ಬೆಳಗ್ಗೆಯೇ ಅಕ್ಕಿ ಹಿಟ್ಟಿಗೆ ಸ್ವಲ್ಪ ರವೆ ಹಾಗೂ ಉಪ್ಪು ಹಾಕಿ. ನೀರು ಹಾಕಿ ಮಿಕ್ಸ್ ಮಾಡಿ ದೋಸೆ ಮಾಡಬಹುದು
ಇದಕ್ಕೆ ಕಾಂಬಿನೇಷನ್ ಆಗಿ ಆಲೂಗಡ್ಡೆ ಪಲ್ಯ ಹಾಗೂ ಚಟ್ನಿ ಅದ್ಭುತವಾಗಿ ಇರುತ್ತದೆ. ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ
ಆನಂತರ ಒಗರಣೆಗೆ ಎಣ್ಣೆ ಹಾಕಿ, ಬಿಳಿ ಈರುಳ್ಳಿ ಹಾಗೂ ಹಸಿಮೆಣಸು, ಉಪ್ಪು, ಹಾಕಿ ಬಾಡಿಸಿ
ನಂತರ ಹಸಿಮೆಣಸಿನಕಾಯಿಯನ್ನು ತೆಗೆದುಬಿಡಿ, ಆನಂತರ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಬಹುದು. ಹೀಗೆ ಮಾಡಿದ್ರೆ ಪಲ್ಯ ರೆಡಿ



