ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ಹೆಚ್ಚು ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ಸಕ್ಕರೆ, ಕಾರ್ಬೋಹೈಡ್ರೇಟ್ ಆಹಾರದ ಮೇಲೆ ಸಂಪೂರ್ಣ ನಿಯಂತ್ರಣ ಇರಿಸಬೇಕು.
ನಿಯಮಿತ ಏರೋಬಿಕ್ ವ್ಯಾಯಾಮ, ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವುದು ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ. ಜೊತೆಗೆ, ಸಕ್ಕರೆ ಮಟ್ಟವನ್ನು ಪ್ರತಿ ನಿತ್ಯ ತಪಾಸಣೆ ಮಾಡುತ್ತ ಬರುವುದರಿಂದ ಸಕ್ಕರೆ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಚಾಕೋಲೆಟ್ಸ್ ಬದಲು ಈ ಸಿಹಿ ನೀಡಬಹುದು…
ಡಾರ್ಕ್ ಚಾಕೊಲೇಟ್
ಸಿರಿಧಾನ್ಯದ ಹಿಟ್ಟು
ಡ್ರೈಫ್ರೂಟ್ಸ್ ಲಡ್ಡು
ಹಣ್ಣುಗಳಿಂದ ತಯಾರಿಸಿದ ತಿನಿಸುಗಳು (ಸ್ಮೂಥಿಸ್, ಮೊಸರು, ಕಸ್ಟರ್ಡ್ ಇತ್ಯಾದಿ…)
ಚಿಕ್ಕಿ, ಮಖಾನ, ಧಾನ್ಯಗಳಿಂದ ಮಾಡಿದ ಬಿಸ್ಕೆಟ್.