PARENTING | ಟೆಕ್ನಾಲಜಿ ಯುಗದಲ್ಲಿ ಮಕ್ಕಳನ್ನು ರಕ್ಷಿಸೋದು ಹೇಗೆ? ಎರಡು ಸೂತ್ರ ಪಾಲಿಸಿ…

ನಾವು ನೀವೆಲ್ಲಾ ಟೀನೇಜರ‍್ಸ್ ಇರುವಾಗ ಎಲ್ಲಿತ್ತು ಇಷ್ಟೊಂದು ಟೆಕ್ನಾಲಜಿ, ಮೆಸೇಜ್ ಕಾಲ್ ಬಿಟ್ರೆ ವಿಡಿಯೋ ಕಾಳ್ ಕೂಡ ಇರಲಿಲ್ಲ. ಆದರೆ ಈಗ ಆನ್‌ಲೈನ್ ಸೋರ್ಸ್ ಬಳಕೆ ಮಾಡಿ ಏನು ಬೇಕಾದರೂ ಮಾಡಬಹುದು.

ಫೇಕ್ ವಿಡಿಯೋ, ಫೇಕ್ ಲವ್, ನಂಬಿಕೆ-ಮೋಸ ಇನ್ನು ಸಾವಿರಾರು. ವರ್ಷಗಟ್ಟಲೆ ಮುದ್ದಾಗಿ ಸಾಕಿದ ಮಕ್ಕಳನ್ನು ಈ ಜಗತ್ತಿನಿಂದ ಎಷ್ಟು ದಿನ ಪ್ರೊಟೆಕ್ಟ್ ಮಾಡಲು ಸಾಧ್ಯ? ಅವರು ಬದುಕಲು ಕಲಿಯಲೇಬೇಕು.

ಮಕ್ಕಳನ್ನು ಕಾಪಾಡಲು ಈ ಎರಡು ಸೂತ್ರಗಳನ್ನು ಅನುಸರಿಸಿ…

ಮೊದಲನೆಯದು, ನಿಮಗೆಲ್ಲರಿಗೂ ಗೊತ್ತಿರುವಂತೆ ಚಿಕ್ಕ ವಯಸ್ಸಿನಿಂದಲೇ ಮೊಬೈಲ್ ಕೊಡುವ ಅಭ್ಯಾಸ ಕಡಿಮೆ ಮಾಡಿ. ಸ್ಕ್ರೀನ್ ಟೈಮ್ ನಿಗದಿ ಮಾಡಿ, ಅದರ ನಂತರ ಒಂದು ನಿಮಿಷವೂ ಮೊಬೈಲ್ ಕೊಡಬೇಡಿ. ಈ ಅಭ್ಯಾಸ ಮುಂದೆ ಅವರಿಗೆ ಸಹಾಯ ಮಾಡುತ್ತದೆ.

ಎರಡನೆಯದ್ದು, ಇದು ತುಂಬಾ ಮುಖ್ಯವಾದ್ದು. ಮಕ್ಕಳ ಸೆಲ್ಫ್ ಎಸ್ಟೀಮ್, ಕಾನ್ಫಿಡೆನ್ಸ್ ಮೇಲೆ ಗಮನ ಕೊಡಿ. ರೋಗ ಬರಲೇಬಾರದು ಅಂದ್ರೆ ಆಗೋದಿಲ್ಲ. ರೋಗ ಬಂದರೂ ದೇಹ ಅದನ್ನು ಫೈಟ್ ಮಾಡುವಂಥ, ಫೈಟ್ ಮಾಡಿದ್ದು ನಮಗೆ ತಿಳಿಯದ ರೀತಿ ರೋಗನಿರೋಧಕ ಶಕ್ತಿ ಹೆಚ್ಚಿಸಿ. ತನ್ನ ರೂಪ, ಗುಣ, ಆಸ್ತಿ, ಓದು ಯಾವುದೂ ಜನರನ್ನು ಅಳೆಯಲಾಗದು. ತಮ್ಮ ಮೇಲೆ ತಮಗೆ ಕಾನ್ಫಿಡೆನ್ಸ್ ಇಲ್ಲದ ಮಕ್ಕಳೇ ಹೆಚ್ಚಾಗಿ ಆನ್‌ಲೈನ್ ಸ್ಕಾಮ್‌ಗಳಿಗೆ ಒಳಗಾಗುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!