May 15, 2026
Friday, May 15, 2026
spot_img

SAFETY | ಸಿಡಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳೋದು ಹೇಗೆ? ಈ ರೀತಿ ಮಾಡಿ

ಕಳೆದ ಎರಡು ದಿನಗಳಿಂದ ಸಿಡಿಲು ಬಡಿದು ಮೃತಪಟ್ಟವರ ಸುದ್ದಿಗಳನ್ನು ಕೇಳಿರುತ್ತೀರಿ. ತೋಟದಲ್ಲಿ ಕೆಲಸ ಮಾಡುವಾಗ, ಕುರಿ ಮೇಯಿಸುವಾಗ ಇನ್ನಿತರ ಸಂದರ್ಭಗಳಲ್ಲಿ ಸಿಡಿಲು ಬಡಿದಿದೆ. ಸಿಡಿಲು ಆರಂಭವಾದ ಸಮಯದಲ್ಲಿ ಸುತ್ತಮುತ್ತ ಏನಿದೆ ಎಂದು ಒಮ್ಮೆ ಸರಿಯಾಗಿ ನೋಡಿಕೊಳ್ಳಿ. ತಕ್ಷಣ ಕೆಲಸ ಮಾಡೋದನ್ನು ನಿಲ್ಲಿಸಿ ಕೆಳಕ್ಕೆ ಬಗ್ಗಿ ಕೂತುಬಿಡಿ. ಇನ್ನಷ್ಟು ಟಿಪ್ಸ್‌ ಇಲ್ಲಿದೆ..

ನಿಮ್ಮ ಸುತ್ತಮುತ್ತ ಯಾವುದೇ ಮಶೀನ್ಸ್‌ ಅಥವಾ ಎಲೆಕ್ಟ್ರಾನಿಕ್‌ ಐಟಮ್ಸ್‌ ಇದ್ದರೆ ಅದರಿಂದ ದೂರ ಇರಿ. ಮನೆಯಲ್ಲಿದ್ದರೆ ಇವುಗಳನ್ನು ಆಫ್‌ ಮಾಡಿ.

ಹೊರಗಡೆ ಇದ್ದಾಗ ಗುಡುಗು, ಮಿಂಚು ಆರಂಭವಾದರೆ ಗುಡ್ಡ, ದಿಣ್ಣೆಗಳ ಮೇಲಿದ್ದರೆ ಮೊದಲು ಕೆಳಕ್ಕೆ ಇಳಿದುಬಿಡಿ. ಎತ್ತರದ ಜಾಗ, ವಸ್ತುವಿಗೆ ಮೊದಲು ಸಿಡಿಲು ತಾಗುತ್ತದೆ.

ಸಿಡಿಲು ಬರುತ್ತಿರುವ ಸಮಯದಲ್ಲಿ ನೀರಿನಲ್ಲಿ ಇರಬೇಡಿ. ಸ್ವಿಮ್ಮಿಂಗ್‌ ಮತ್ತಿತರ ಆಕ್ಟಿವಿಟಿಗಳನ್ನು ಮಾಡಬೇಡಿ.

ಗಾಳಿಪಟ ಹಾರಿಸಬೇಡಿ. ಗಾಳಿಪಟಕ್ಕೆ ಸಿಡಿಲು ಬಡಿದರೆ ದಾರ ನಿಮ್ಮ ಕೈಯಲ್ಲಿ ಇರುತ್ತದೆ. ಕ್ಷಣದಲ್ಲಿಯೇ ಪ್ರಾಣ ಹೋಗುತ್ತದೆ.

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಮರದ ಅಡಿಯಲ್ಲಿ ರಕ್ಷಣೆ ತೆಗೆದುಕೊಳ್ಳುವುದು. ಈ ರೀತಿ ಮಾಡಿದರೆ ಮರಕ್ಕೆ ಹೊಡೆದ ಸಿಡಿಲು ನಿಮ್ಮನ್ನು ಕೊಲ್ಲುತ್ತದೆ.

ಸುತ್ತಮುತ್ತ ಯಾವುದಾದರೂ ಕಾರ್‌ ಇದ್ದರೆ ಅದರೊಳಗೆ ರಕ್ಷಣೆ ಪಡೆಯಿರಿ.

ಸಣ್ಣ ಪುಟ್ಟ ಗುಡಿಸಲು, ಪಾರ್ಕಿಂಗ್‌ ಏರಿಯಾದಲ್ಲಿ ನಿಲ್ಲಬೇಡಿ. ಸಿಮೆಂಟ್‌ ಬಿಲ್ಡಿಂಗ್‌ ಒಳಕ್ಕೆ ಹೋಗಿ. ಮನೆಯ ಮುಂದೆ ಅಲ್ಲ ಮನೆಯೊಳಕ್ಕೇ ಹೋಗಿ.

ಎಲ್ಲಾದರೂ ಎತ್ತರದ ಕಂಬಗಳು, ಕರೆಂಟ್‌ ಕಂಬ, ಮರದ ಕೆಳಗೆ ನಿಲ್ಲಬೇಡಿ.

ಬಯಲು ಪ್ರದೇಶಗಳಲ್ಲಿ ಓಡಾಟ ಬೇಡ. ಕೆಳಗ್ಗೆ ಕುಳಿತುಕೊಂಡು ಕಿವಿಗಳನ್ನು ಮುಚ್ಚಿ ಸಿಡಿಲು ಹೋಗುವವರೆಗೂ ಕಾಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !