ಹೇಗಿರಲಿದೆ ಬ್ರಿಟನ್ ರಾಣಿ ಅಂತ್ಯಕ್ರಿಯೆ? ವಿಶಿಷ್ಟ ವಿಧಿವಿಧಾನಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯ ಇಂದು ನಡೆಯಲಿದೆ.
ರಾಣಿ ಎಲಿಜಬೆತ್ ನಿಧನದ ನಂತರದ 11 ದಿನಗಳ ಶೋಕಾಚರಣೆ ಅಂತ್ಯಕ್ರಿಯೆಯೊಂದಿಗೆ ಕೊನೆಗೊಳ್ಳಲಿದೆ. ವಿಶ್ವದ ಬಹುತೇಕ ಪ್ರಮುಖ ನಾಯಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಿವಿಧಾನಗಳೇನು?

ರಾಣಿ ವಿಕ್ರೋರಿಯಾ ಅಂತ್ಯಸಂಸ್ಕಾರಕ್ಕೆ ಬಳಸಲಾದ ಬಂದೂಕಿನ ಗಾಡಿಯಲ್ಲಿ ಎಲಿಜಬೆತ್ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತದೆ.

42 ನಾವಿಕರು ಶವಪೆಟ್ಟಿಗೆಯನ್ನು ಹೊತ್ತ ಬಂದೂಕಿನ ಗಾಡಿಯನ್ನು ಎಳೆಯುತ್ತಾರೆ.

ಈ ದಾರಿಯಲ್ಲಿ ರಾಯಲ್ ನೇವಿ ಮತ್ತು ಮೆರೈನ್ ಘಟಕಗಳಿಗೆ ಸೇರಿದ ಯೋಧರು ಸಾಲಾಗಿ ನಿಲ್ಲುತ್ತಾರೆ.

ಮೆರವಣಿಗೆ ಹಾದುಹೋಗುವ ಮಾರ್ಗದಲ್ಲಿ ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯ ಸದಸ್ಯರು ಗಾರ್ಡ್ ಆಫ್ ಆನರ್ ನೀಡುತ್ತಾರೆ. ಈ ವೇಳೆ ಬ್ಯಾಂಡ್ ಗೀತೆಗಳನ್ನು ನುಡಿಸುತ್ತದೆ.

ಸ್ಕಾಟಿಷ್ ಹಾಗೂ ಐರಿಷ್ ರೆಜಿಮೆಂಡ್‌ಗಳು ಮೆರವಣಿಗೆಯನ್ನು ಮುನ್ನಡೆಸಲಿವೆ.

200 ಮಂದಿ ಇರುವ ಗೂರ್ಖಾ ಬ್ರಿಗೇಡ್ ಮತ್ತು ರಾಯಲ್ ಏರ್‌ಫೋರ್ಸ್ ಬ್ಯಾಂಡ್‌ನ ಸಿಬ್ಬಂದಿ ಶವಪೆಟ್ಟಿಗೆ ಜೊತೆ ಹೆಜ್ಜೆ ಹಾಕುತ್ತಾರೆ.

ವಿಧಿಗಳ ನಂತರ ರಾಣಿಯ ಶವಪೆಟ್ಟಿಗೆಯನ್ನು ರಾಯಲ್ ಹಿಯರ‍್ಸ್ ಮೂಲಕ ವಿಂಡ್ಸಲ್ ಕ್ಯಾಸಲ್ ಕಮಿಟ್ಟಲ್ ಸರ್ವೀಸ್‌ಗಾಗಿ ಕೊಂಡೊಯ್ಯಲಾಗುತ್ತದೆ.

ನಂತರ ರಾಜಮನೆತನಕ್ಕೆ ಮೀಸಲಾದ ಜಾಗದಲ್ಲಿ ರಾಣಿಯ ಪಾರ್ಥೀವ ಶರೀರವನ್ನು ಸಮಾಧಿ ಮಾಡಲಾಗುತ್ತದೆ.

ಎಲಿಜಬೆತ್‌ರ ದಿವಂಗತ ಪತಿ, ಪೋಷಕರು ಹಾಗೂ ಸಹೋದರಿಯರ ಜೊತೆ ಎಲಿಜಬೆತ್ ಅವರ ಸಮಾಧಿ ಮಾಡಲಾಗುತ್ತದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!