ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಬೇತಿ ವಿಮಾನ ಪತನಗೊಂಡು ಭಾರತದ ಇಬ್ಬರು ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕೆನಾಡದಲ್ಲಿ ನಡೆದಿದೆ. ಅಭಯ್ ಗದ್ರು ಮತ್ತು ಆಶ್ ರಾಮುಗಡೆ ಅವರು ಶನಿವಾರ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಮುಂಬೈ ಮೂಲದವರೆಂದು ತಿಳಿದುಬಂದಿದೆ.
ಇವರಿಬ್ಬರೂ ಒಂದೇ ಕುಟುಂಬದವರು ಎಂಬುದು ಗಮನಾರ್ಹ. ಪೈಪರ್ ಪಿಎ -34 ಸೆನೆಕಾ ವಿಮಾನ ಚಿಲ್ಲಿವಾಕ್ ಸಿಟಿ ಬಳಿಯ ಮೋಟೆಲ್‌ನ ಪೊದೆಗೆ ಇದ್ದಕ್ಕಿದ್ದಂತೆ ಅಪ್ಪಳಿಸಿ ದುರ್ಘಟನೆ ಸಂಭವಿಸಿದೆ.
ಈ ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ. ಅಪಘಾತದಲ್ಲಿ ಮತ್ತೊಬ್ಬ ಪೈಲಟ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.