ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರನ್ನು ಚಲನಚಿತ್ರ ಕಾರ್ಯಕ್ರಮಗಳಲ್ಲಿ ಅಥವಾ ಹೊರಗೆ ಭೇಟಿಯಾದಾಗ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ತಾರೆ ಅಥವಾ ಅವರನ್ನು ಅಪ್ಪಿಕೊಳ್ತಾರೆ. ಇದು ಎಲ್ಲಾ ಕಡೆ ಕಾಮನ್ ವಿಚಾರ. ಆದರೆ, ಬಾಲಿವುಡ್ ಸ್ಟಾರ್ ಹೀರೋ ಹೃತಿಕ್ ರೋಷನ್ ಅಭಿಮಾನಿಯೊಬ್ಬರ ಕಾಲಿಗೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಕಲ್ಟ್ ಫಿಟ್ ಕಂಪನಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೃತಿಕ್ ರೋಷನ್ ಅತಿಥಿಯಾಗಿ ಭಾಗವಹಿಸಿದ್ದರು. ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆಗಳನ್ನು ನೀಡಲು ಪ್ರತಿಯೊಬ್ಬರನ್ನು ವೇದಿಕೆಗೆ ಕರೆಯಲಾಯಿತು. ವೇದಿಕೆಗೆ ಬಂದ ಅಭಿಮಾನಿಯೊಬ್ಬ ಹೃತಿಕ್ ರೋಷನ್ ಕಾಲಿಗೆ ನಮಸ್ಕರಿಸಿದ್ದರು. ಹೃತಿಕ್ ತಕ್ಷಣ ಅಭಿಮಾನಿಯ ಕಾಲಿಗೆ ನಮಸ್ಕರಿಸಿದ್ದಾರೆ ಈ ವೀಡಿಯೊ ವೈರಲ್ ಆಗಿದೆ. ಓ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಹೃತಿಕ್ ಅಭಿಮಾನಿಗಳು ಹೃತಿಕ್ ರೋಷನ್ ಅವರನ್ನು ಕೊಂಡಾಡುತ್ತಿದ್ದಾರೆ.
Hrithik Roshan touching his fan feet.😭❤ Such a gem of a person he is @iHrithik . There is really no like him.❤ #VikramVedha pic.twitter.com/DAkgijMMgE
— अमित ™ (@HRxfan_boy) August 27, 2022