ಹುಬ್ಬಳ್ಳಿ ಪ್ರಕರಣ: ರಾಜ್ಯ ಸರ್ಕಾರದ ತುಷ್ಟೀಕರಣ ನೀತಿ ಖಂಡಿಸಿ ಪ್ರತಿಭಟನೆ

ಹೊಸದಿಗಂತ ಹುಬ್ಬಳ್ಳಿ:

ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸುವುದು ರಾಷ್ಟ್ರೀಯತೆ.‌ ನಮಗೆ ಬೇಕಾಗಿರುವುದು ರಾಷ್ಟ್ರೀಯಕರಣವೇ ಹೊರತು ತೃಷ್ಟೀಕರಣವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಡಾ. ರವೀಂದ್ರ ಹೇಳಿದರು.

ಇಂದಿರಾ ಗಾಜಿನ ಮನೆಯಲ್ಲಿ ಸದ್ಭಾವನ ವೇದಿಕೆ ವತಿಯಿಂದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ರಾಜ್ಯ ಸರ್ಕಾರ ಹಿಂಪಡೆದು ತೃಷ್ಟೀಕರಣ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಪ್ರತಿಭಟನಾ ಸಭೆ ಸರ್ಕಾರ, ಪಕ್ಷ, ಜಾತಿ, ಧರ್ಮ ಹಾಗೂ ಮುಸ್ಲಿಮರ ವಿರುದ್ಧವಲ್ಲ. ರಾಷ್ಟ್ರೀಯತೆಗೆ ಧಕ್ಕೆ ತರುವ ದುಷ್ಟರ ವಿರುದ್ಧವಾಗಿದೆ. ಹಿಂದೆ ಮುಸ್ಲಿಮರ ರಾಷ್ಟ್ರೀಯತೆ ವಿಚಾರವಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ವಿಚಾರವನ್ನು ಈಗಿ‌ನ ಮುಸ್ಲಿಮರ ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಸಲುವಾಗಿ ತೃಷ್ಟೀಕರಣಕ್ಕೆ ಒಳಗಾಗಬಾರದು ಎಂದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಭಾಗಿಯಾದವರ ಪರವಾಗಿ ಕೆಲವರು ನಿಂತಿದ್ದು, ಅವರನ್ನು ನೀವು ಸಮಾಜದಿಂದ ದೂರವಿಟ್ಟು ಒಳ್ಳೆಯ ಬದುಕು ನಡೆಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಲವು ಅಪರಾಧ ಪ್ರಕರಣಗಳ ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದು ಎಲ್ಲ ಸರ್ಕಾರದ ಅವಧಿಯಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ಸಚಿವ ಸಂಪುಟದಲ್ಲಿ ನಿರ್ಧಾರ ಆಗಿದೆ. ಆದರೆ ತನಿಖೆ ಎನ್ ಐಎ ನಡೆಸುವುದರಿಂದ ನ್ಯಾಯಾಲಯದಲ್ಲಿ ನಿರ್ಧಾರ ಆಗಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!