ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: ಅಯ್ಯಪ್ಪ ಸನ್ನಿಧಿ ನೆಲಸಮಕ್ಕೆ ಗಜಾನನ ಸ್ವಾಮೀಜಿ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹುಬ್ಬಳ್ಳಿ ನಗರದ ಅಯ್ಯಪ್ಪ ಮಾಲಾಧಾರಿಗಳ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂಬತ್ತು ಜನರ ಪೈಕಿ ಒಬ್ಬೊಬ್ಬರೆ ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸದ್ಯ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಮಧ್ಯೆ 22 ವರ್ಷದ ಹಿಂದೆ ನಿರ್ಮಿಸಿದ್ದ ಅಯ್ಯಪ್ಪ ಸನ್ನಿಧಿ ನೆಲಸಮಕ್ಕೆ ನಿರ್ಧಾರ ಮಾಡಲಾಗಿದೆ.

ಅಚ್ಚವ್ವನ ಕಾಲೋನಿಯಲ್ಲಿ 22 ವರ್ಷದ ಹಿಂದೆ ಅಯ್ಯಪ್ಪ ಸನ್ನಿಧಿ ನಿರ್ಮಿಸಲಾಗಿತ್ತು. ಗಜಾನನ ಜಿತೂರಿ ಸ್ವಾಮೀಜಿ ಅವರು ಈ ಸನ್ನಿಧಿ ನಿರ್ಮಿಸಿದ್ದರು. ಇದೀಗ ಘಟನೆಯಿಂದ ಮನನೊಂದಿರುವ ಗಜಾನನ ಜಿತೂರಿ ಸ್ವಾಮೀಜಿ, ಅಯ್ಯಪ್ಪ ಸ್ವಾಮಿ ಸನ್ನಿಧಿ ನೆಲಸಮ ಮಾಡಲು ನಿರ್ಧರಿಸಿದ್ದಾರೆ. ಆ ಸನ್ನಿಧಿ ನೋಡುವುದಕ್ಕೆ ಆಗಲ್ಲ ಎಂದು ಕಣ್ಣೀರು ಹಾಕಿದ್ದು, ಏರಿಯಾದ ಜನರಿಗೆ ಹೇಳಿ ಸನ್ನಿಧಿ ತೆರವು ಮಾಡುತ್ತೇನೆ ಎನ್ನುತ್ತಿದ್ದಾರೆ.

ಇನ್ನು ದುರಂತದಲ್ಲಿ ಮೃತಪಟ್ಟ ಲಿಂಗರಾಜ ಬೆರನೂರು ಮನೆಯಲ್ಲಿ ಇಂದು ತಿಥಿ ಕಾರ್ಯ ಮಾಡಲಾಗಿದೆ. ಮಗ ಲಿಂಗರಾಜನನ್ನು ನೆನೆದು ತಾಯಿ ಕವಿತಾ ಕಣ್ಣೀರು ಹಾಕಿದ್ದಾರೆ. ಲಿಂಗರಾಜಗೆ ಐಟಿಐ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು, ಆದರೆ ತಾಯಿಗೆ ನೆರವಾಗಲು ಓದು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ. ಸ್ವಂತ ಮನೆಯಿಲ್ಲದೆ ಜೀವನ ನಡೆಸುತ್ತಿದ್ದ ಲಿಂಗರಾಜ ಕುಟುಂಬ, ತಾಯಿ ಕವಿತಾಗೆ ಇದ್ದ ಒಬ್ಬ ಗಂಡು ಮಗ ಲಿಂಗರಾಜ ಮಾತ್ರ. ಕೆಎಲ್​ಇನಲ್ಲಿ ಗುತ್ತಿಗೆ ಆಧಾರದ ಮೇಲೆ ಅಟೆಂಡರ್​ ಆಗಿರುವ ತಾಯಿ, ನಮಗೆ ಪರಿಹಾರ ಹಣ ಬೇಡ ಸರ್ಕಾರಿ ಕೆಲಸ ನೀಡಿದರೆ ನೆರವಾಗುತ್ತೆ. ಮನೆಗೆ ಆಧಾರವಾಗಿದ್ದ ಮಗ ಮೃತಪಟ್ಟಿದ್ದಾನೆ. ಸರ್ಕಾರಿ ನೌಕರಿ ಕೊಟ್ರೆ ಮನೆ ನಡೆಯೋಕೆ ಅನುಕೂಲ ಆಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!