Friday, February 3, 2023

Latest Posts

ಹುಬ್ಬಳ್ಳಿ:  ಡಿ. 21 ರಂದು ದಿಗಂಬರ ಜೈನ ಸಮಾಜ ಮೌನ ಪ್ರತಿಭಟನೆ

ಹೊಸದಿಗಂತ ವರದಿ, ಹುಬ್ಬಳ್ಳಿ:
ಜಾರ್ಖಂಡ್‌ ನ ಗಿರಡಿ ಜಿಲ್ಲೆಯಲ್ಲಿರುವ ಸಮ್ಮೆದಗಿರಿ‌ಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿರುವ ಸರ್ಕಾರದ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ನಗರದ ದಿಗಂಬರ ಜೈನ ಸಮಾಜ ಡಿ. 21 ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಲ್ಲಿ ಮೌನ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಶಾಂತಿನಾಥ ಹೂತಪೇಟೆ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ಜೈನ ಪರಮೋಚ್ಚ ಹಾಗೂ ಪವಿತ್ರ ಸ್ಥಳವಾದ ಜಾರ್ಖಾಂಡ ರಾಜ್ಯದ ಗಿರಡಿ ಜಿಲ್ಲೆಯ ಸಮ್ಮೆದಗಿರಿ ಕ್ಷೇತ್ರವನ್ನು ಅಲ್ಲಿಯ ಸರ್ಕಾರ ಪ್ರವಾಸ ತಾಣವೆಂದು ಘೋಷಣೆ ಮಾಡಿದೆ. ಈ ಮೂಲಕ ಜೈನ ಸಮಾಜದ ಪವಿತ್ರತೆಗೆ ಧಕ್ಕೆ ತರುವ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿ. 21 ರಂದು ಬೆಳಿಗ್ಗೆ 10 ಗಂಟೆಗೆ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಿಂದ ಮೌನ ಪ್ರತಿಭಟನೆ ಆರಂಭವಾಗಿ ದುರ್ಗದ ಬೈಲ್, ಬ್ರಾಡವೇ, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ಚನ್ನಮ್ಮ ವೃತ್ತದ ವರಗೆ ಮೆರವಣಿಗೆ ನಡೆಸಿಲಾಗುತ್ತದೆ. ಬಳಿಕ ತಹಶೀಲ್ದಾರ ಮೂಲಕ ಕೇ‌ಂದ್ರ ಸರ್ಕಾರ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!