ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ರಾಣಿ ಚನ್ನಮ್ಮ ಮೈದಾನ ಗಣೇಶ ಮೂರ್ತಿ ವಿಸರ್ಜನೆ ಶ್ರದ್ಧಾ ಭಕ್ತಿಯಿಂದ ಸಂಜೆ ೪.೩೬ ಕ್ಕೆ ಇಲ್ಲಿಯ ಇಂದಿರಾ ಗ್ಲಾಸ್ ಹೌಸ್ ನ ಪಾಲಿಕೆಯ ಜಾಗದ ಬಾವಿಯಲ್ಲಿ ನಡೆಯಿತು.
ಶಾಸಕ ಮಹೇಶ ಟೆಂಗಿನಕಾಯಿ ಅವರ ನೇತೃತ್ವದಲ್ಲಿ ಹಿಂದು ಪರ ವಿವಿಧ ಸಂಘಟನೆಗಳು ಕೊನೆಯ ಮಹಾಮಂಗಳಾರತಿ ನೆರವೇರಿಸುವ ಮೂಲಕ ಗಣೇಶನಿಗೆ ಅಂತಿಮ ವಿದಾಯ ಸಲ್ಲಿಸಿದರು.
ಮೊರಿಯಾ ರೆ ಬಪ್ಪಾ ಮೊರಿಯಾ ರೆ ಎನ್ನುತ್ತಾ ಹಾಡು ಹಾಡಿದರು. ಜೈ ಶ್ರೀರಾಮ್ ಎನ್ನುತ್ತಾ ಘೋಷಣೆ ಕೂಗಿದರು. ನೂರಾರು ಜನ ಭಕ್ತರ ನಡುವೆ ಮೆರವಣಿಗೆ ಮೂಲಕ ಬಾವಿ ತಲುಪಿತು. ವಿಸರ್ಜನೆ ನಂತರ ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮಿಸಿದರು. ಶಾಂತಿಯುತವಾಗಿ ವಿಸರ್ಜನೆಯಾಯಿತು. ಪೊಲೀಸ್ ಬಂದೋಬಸ್ತ್ ನಲ್ಲಿ ಮೆರವಣಿಗೆ ನಡೆಯಿತು.