ಹೊಸದಿಗಂತ ವರದಿ, ಯಲ್ಲಾಪುರ:
ಪ್ರವಾಸಕ್ಕಾಗಿ ಸಾತೊಡ್ಡಿ ಜಲಪಾತಕ್ಕೆ ಬಂದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಓರ್ವ ಜಲಪಾತದ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ಹಸನ ಮದಾರಸಾಬ್ ಕಾಲೆಮದರ್ (36) ಎಂಬಾತನೆಮೃತಯುವಕನಾಗಿದ್ದಾನೆ.ಹುಬ್ಬಳ್ಳಿ ಮೌಲಾಲಿ ದರ್ಗಾಬಳಿ ನಿವಾಸಿಯಾಗಿದ್ದ ಈತ ಕೂಲಿ ಕೆಲಸಮಾಡಿಕೊಂಡಿದ್ದ. ಮಂಗಳವಾರ ಸಂಜೆ ತನ್ನಸಂಬಂಧಿಕರು ಹಾಗೂ ಸ್ನೇಹಿತರ ಜೊತೆಸಾತೊಡ್ಡಿ ಜಲಪಾತಕ್ಕೆ ಬಂದಿದ್ದ ಈ ವೇಳೆಈಜಾಡಲು ಜಲಪಾತಕ್ಕೆ ಇಳಿದ್ದಾನೆ. ನೀರಿಗೆಇಳಿದ ಈತನ ಕಾಲು ಜಾರಿದ್ದು, ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..