ಹುಬ್ಬಳ್ಳಿ| ಅತಿವೃಷ್ಟಿಯಿಂದ ಅಪಾರ ಬೆಳೆ ನಾಶ: ಕೇಂದ್ರ ಅಂತರ್‌ ಸಚಿವಾಲಯ ಅಧ್ಯಯನ ತಂಡದಿಂದ ಪರಿಶೀಲನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಅಧ್ಯಯನ ತಂಡವು ವಿವಿಧ ಪ್ರದೇಶಕ್ಕೆ‌ ಭೇಟಿ ನೀಡಿ ಗುರುವಾರ ಪರಿಶೀಲನೆ‌ ನಡೆಸಿದರು‌.

ತಾಲೂಕಿನ ಕಿರೇಸೂರ ಗ್ರಾಮದ ಲಿಂಗನಗೌಡ ರಾಯಣ್ಣ ಗೌಡ ಅವರ ಒಂದು ಎಕರೆ ಹತ್ತಿ ಜಮೀನು ಹಾಗೂ ೧ ಎಕರೆ ಹೆಸರು ಪ್ರದೇಶ ವೀಕ್ಷಣೆ ಮಾಡಿದರು. ಸಿ.ಎಂ ಹುಲ್ಲಿಕಟ್ಟಿ ಅವರ ಉದ್ದಿನ ಜಮೀನು ವೀಕ್ಷಿಸಿದರು. ಪ್ರವೀಣ ಕಮಡೋಳಿ ಈರುಳ್ಳಿ ಜಮೀನ ವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಮಾತನಾಡಿ, ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ಅಧ್ಯಯನ ತಂಡವು ಭೇಟಿ ನೀಡಿ ಜಿಲ್ಲೆಯ ಅಪಾರ ಪ್ರಮಾಣದಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಪ್ರವಾಹ ಹಾಗೂ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲಾಡಳಿತದಿಂದ ಪರಿಶೀಲಿಸಿ ವರದಿ ತಯಾರಿಸಲಾಗಿದೆ.ಈ ತಂಡ ಆ ವರದಿ ಹಾಗೂ ಅವರು ಸ್ವತಃ ಹಲವಾರು ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವರು ಎಂದರು.

ಕೇಂದ್ರ ಜಲ ಶಕ್ತಿ ಸಚಿವಾಲಯ ನಿರ್ದೇಶಕ ಅಶೋಕ ಕುಮಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನೀಯರ ವಿ.ವಿ.ಶಾಸ್ತ್ರಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!