ಹೊಸದಿಗಂತ ವರದಿ, ಹುಬ್ಬಳ್ಳಿ
ನಗರದಲ್ಲಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಬಿರುಸಿನ ಮತದಾನ ನಡೆಯುತ್ತಿದೆ.
ಇಲ್ಲಿಯ ದೇಶಪಾಂಡೆ ನಗರದ ಎನ್ ಆರ್ ದೇಶಪಾಂಡೆ ರೋಟರಿ ಕನ್ನಡ ಮಾಧ್ಯಮ ಶಾಲೆ, ಭೈರಿದೇವರ ಕೊಪ್ಪದ ಸನಾ ಸಾಹಿನ ಪಿಯು ಸೈನ್ಸ್ ಕಾಲೇಜು, ಗೋಕುಲ ರಸ್ತೆ ಬಸೇಶ್ವರ ನಗರದ ಚೆನ್ನಬಸಮ್ಮ ಲಿಂಗನಗೌಡ ಪಾಟೀಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿ.ಬಿ. ರಸ್ತೆ ಬಾಸೆಲ್ ಮಿಶನ್ ಶಾಲೆ, ತಹಶೀಲ್ದಾರರ ಕಚೇರಿ ಕೋಟ್೯ ಹಾಲ್, ಹೆಬಸೂರ ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ವರೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರಗಳಲ್ಲಿ ಮತಾದಾನ ನಡೆಯುತ್ತಿದ್ದು, ಶಿಕ್ಷಕ ಮತದಾರರು ಆಗಮಿಸಿ ಮತದಾನ ಮಾಡಿದರು.
ಮತ ಕೇಂದ್ರಕ್ಕೆ ಹೊರಟ್ಟಿ ಭೇಟಿ:
ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಯವರು ಇಲ್ಲಿಯ ದೇಶಪಾಂಡೆ ನಗರದ ಎನ್. ಆರ್. ದೇಸಾಯಿ ರೋಟರಿ ಕನ್ನಡ ಮಾಧ್ಯಮ ಶಾಲೆಗೆ ಭೇಟಿ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಶೇ. 70 ರಷ್ಟು ಮತಗಳನ್ನು ಪಡೆಯಲಿದ್ದೇನೆ. ಸೋಲಿಲ್ಲದ ಸರದಾರ ಎಂಬ ಪಟ್ಟ ಮುಂದುವರಿಯಲಿದೆ. ಪ್ರತಿ ಪಕ್ಷಗಳು ಏನೇ ಅಪಪ್ರಚಾರ ಮಾಡಿದರು ನನ್ನ ಗೆಲುವು ನಿಶ್ಚಿತ ಎಂದರು. ಚುನಾವಣೆ ವೇಳೆ ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ. 42 ವರ್ಷಗಳಿಂದ ಈ ಕ್ಷೇತ್ರದಿಂದ ಪ್ರತಿನಿಧಿಸಿದ್ದೇನೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ನಡೆಸಿದ್ದೇನೆ. ಆರೋಪ ಸಾಬೀತು ಮಾಡಿದರೆ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಹೇಳಿದರು.
ಮತ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಮಾತನಾಡಿ, ನಾಲ್ಕು ಜಿಲ್ಲೆಯ ಪ್ರಚಾರ ಮಾಡಿದ್ದೇನೆ. ಉತ್ತಮ ಬೆಂಬಲ ವ್ಯಕ್ತವಾಗಿದೆ. ಮತದಾರ ಶಿಕ್ಷಕರು ಬದಲಾವಣೆ ಬಯಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆ ಹರಿಸಲು ನಾನೆ ಸೂಕ್ತ ಎಂದು ನಿರ್ಧರಿಸಿದ್ದಾರೆ. ಮೊದಲ ಸುತ್ತಿನಿಂದಲೇ ಜಯಗಳಿಸುತ್ತೇನೆ ಎಂದರು.
ಮತಗಟ್ಟೆ ಕೇಂದ್ರಗಳಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಈ ಕುರಿತು ಚುನಾವಣಾ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಚುನಾವಣಾ ಅಧಿಕಾರಿಗಳಿಗೆ ದೂರ ಕೊಡುವುದಕ್ಕಿಂತ ಮತದಾರ ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಬ್ಯಾಚ್ ಹಾಕಿಕೊಂಡು ಬಂದ ಮತದಾನ ಮಾಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ