ವಿಶಾಖಪಟ್ಟಣ ಕಡಲತೀರಕ್ಕೆ ತೇಲಿ ಬಂದ ಪೆಟ್ಟಿಗೆ ಮೇಲಿದ್ದ ಕುತೂಹಲಕ್ಕೆ ಬ್ರೇಕ್‌, ಅಸಲಿಗೆ ಅದು ಪೆಟ್ಟಿಗೆಯೇ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣ ಕಡಲತೀರಕ್ಕೆ ತೇಲಿಬಂದ ಬೃಹತ್ ಮರದ ಪೆಟ್ಟಿಗೆಗೆ ಬಂದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಅಸಲಿಗೆ ಆ ನಿಗೂಢ ಪೆಟ್ಟಿಗೆ ಎಲ್ಲಿಂದ ಬಂತು? ಯಾವುದೇ ಬೆಲೆಬಾಳುವ ವಸ್ತುಗಳು ಇವೆಯೇ? ಎಂದು ಅಪಾರ ಸಂಖ್ಯೆಯ ಸ್ಥಳೀಯರು, ಪ್ರವಾಸಿಗರು ಆಸಕ್ತಿಯಿಂದ ನೆರೆದಿದ್ದರು. ತಡರಾತ್ರಿ ವೈಜಾಗ್ ವೈಎಂಸಿಎ ಬೀಚ್ ಗೆ ಬಂದ ಮರದ ಪೆಟ್ಟಿಗೆಯನ್ನು ತೆರೆಯಲು ಎಲ್ಲರೂ ಕಾತರದಿಂದ ಕಾದರು. ಕೊನೆಗೂ ಅಲೆಗಳ ಹೊಡೆತಕ್ಕೆ ಸಿಲುಕಿದ ಮರದ ಪೆಟ್ಟಿಗೆಯಲ್ಲಿ ಏನೂ ಇರಲಿಲ್ಲ ಎಂದು ತಿಳಿದುಬಂದಿದೆ.

ಅದೊಂದು ಪೆಟ್ಟಿಗೆಯೇ ಅಲ್ಲ.. ಏಕೆಂದರೆ ಮರದ ತುಂಡುಗಳು ಮಾತ್ರ ಇವೆ. ಅವುಗಳ ನಡುವೆ ಯಾವುದೇ ಅಂತರವಿಲ್ಲ. ಆ ಮರದ ಪೆಟ್ಟಿಗೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅದನ್ನು ತೆರೆಯಲು 2 ಪ್ರೊಕ್ಲೇನ್ ಬಳಸಿದರು. ಅದರೊಳಗೆ ಮರ ಬಿಟ್ಟು ಬೇರೇನೂ ಇಲ್ಲದಿರುವುದು ಕಂಡು ಬಂತು.

ಮರ ತೆಗೆಯುವ ವೇಳೆಯಲ್ಲಿ ಸ್ಫೋಟಕ ವಸ್ತು ಇರುವ ಶಂಕೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿತ್ತು ಕೊನೆಗೆ ಒಳಗೆ ಮರದ ದಿಮ್ಮಿ ಹೊರತು ಬೇರೇನೂ ಇಲ್ಲ ಎಂದು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮರವನ್ನು ವಿಲೇವಾರಿ ಮಾಡುವ ಮೊದಲು, ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಪರಿಶೀಲನೆ ನಡೆಸಿವೆ. ಕರಾವಳಿಯಲ್ಲಿ ಹಡಗುಗಳು ಪರಸ್ಪರ ಡಿಕ್ಕಿಯಾಗದಂತೆ ತಡೆಯಲು ಅವುಗಳನ್ನು ತಡೆಗೋಡೆಯಾಗಿ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರ ಒಟ್ಟು ತೂಕ 100 ಟನ್ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here