ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಸಿಬಿ ಫ್ರಾಂಚೈಸ್ ಇದೀಗ ಮಹಿಳಾ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಪುರುಷರ ತಂಡದಲ್ಲಿ ಮುಖ್ಯ ಕೋಚ್ ಹಾಗೂ ನಿರ್ದೇಶಕರ ಜಾಗಕ್ಕೆ ಆಂಡಿ ಫ್ಲವರ್ ಹಾಗೂ ಮೊ ಬೊಬಾಟ್ ಅವರನ್ನು ನೇಮಕ ಮಾಡಲಾಗಿತ್ತು.
ಇದೀಗ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಬೆನ್ ಸಾಯರ್ ಸ್ಥಾನಕ್ಕೆ ಲ್ಯೂಕ್ ವಿಲಿಯಮ್ಸ್ ಅವರನ್ನು ನೇಮಕ ಮಾಡಲಾಗಿದೆ. ಮಹಿಳಾ ಬಿಗ್ ಬ್ಯಾಷ್ ಲೀಗ್ ವಿಜೇತರಾದ ಲ್ಯೂಕ್ ವಿಲಿಯಮ್ಸ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದು, ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿವೆ.
ಆರ್‌ಸಿಬಿ ಯಶಸ್ಸಿಗಾಗಿ ಹೊಸ ನಿರ್ಧಾರಕ್ಕೆ ಮುಂದಾಗಿದ್ದು, ಇದರಿಂದಾಗಿ ಏನೆಲ್ಲಾ ಬದಲಾವಣೆ ಆಗಲಿದೆ? ಕಾದುನೋಡಬೇಕಿದೆ.