ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಅದ್ದೂರಿಯಾಗಿ ಪಾರ್ಟಿ ಗಳು ನಡೆದಿದ್ದು, ಬರೊಬ್ಬರಿ 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.
2023ರ ಕೊನೆಯ ದಿನವಾದ ನಿನ್ನೆ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ಮದ್ಯದ ದರ ಹೆಚ್ಚಳವಾದರೂ ಚಿಂತೆಯಿಲ್ಲ ಎಂದು ಮದ್ಯ ಪ್ರಿಯರು ಹೊಸ ವರ್ಷಾಚರಣೆಗೆ ಮದ್ಯದ ಕಿಕ್ ಏರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಂತೂ ‘ಎಣ್ಣೆಯ ಮತ್ತೇ ಗಮ್ಮತ್ತು’ ಎಂಬಂತೆ ನಾರಿಯರು, ಯುವಕರು ಎಣ್ಣೆಯಲ್ಲಿ ಮಿಂದೆದಿದ್ದಾರೆ. ಕೆಲವು ಯುವತಿಯರಂತೂ ನಡುರಸ್ತೆಯಲ್ಲೇ ವಾಲಾಡಿ, ತೋರಾಡಿದ್ದಾರೆ.