Friday, June 2, 2023

Latest Posts

VIRAL VIDEO| ಕಂತೆ ಕಂತೆ ಹಣಕ್ಕಾಗಿ ನಾನಾ, ನೀನಾ ಅಂತ ಮುಗಿಬಿದ್ದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದೊಂದು ಕೊಳಕು ಕಾಲುವೆ ನೀರು ದುರ್ವಾಸನೆ ಬೀರುತ್ತಿದ್ದು, ಅಲ್ಲಿ ನಿಲ್ಲಲೂ ಸಾಧ್ಯವಿಲ್ಲ. ಅಂತಹ ಕಾಳುವೆಯಲ್ಲಿ ಕಂತೆ ಕಂತೆ ಹಣವಿರುವ ಚೀಲವೊಂದು ಬಿದ್ದಿದೆ. ದುರ್ವಾಸನೆ, ಕಸ ಅಂತಾನೂ ನೋಡದೆ ಜನಜನಂಗುಳಿ ಆ ಕಾಲುವೆಯೊಳಗಿಳಿದಿದೆ.

ಬಿಹಾರದ ರೋಹ್ತಾಸ್ ಜಿಲ್ಲೆಯ ಮೊರಾಬಾದ್ ಗ್ರಾಮದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ನಡೆದಿದೆ. ಕೊಳಕು ಕಾಲುವೆಯಲ್ಲಿ ಕರೆನ್ಸಿ ನೋಟುಗಳು ಕಾಣಿಸಿಕೊಂಡಿವೆ. ನೋಟುಗಳ ಕಂತೆಗಳನ್ನು ಪಡೆಯಲು ಜನರು ಪೈಪೋಟಿ ನಡೆಸುತ್ತಿದ್ದರು. ಕೈಗೆ ಸಿಕ್ಕಷ್ಟು ಹಣದ ಕಟ್ಟುಗಳನ್ನು ತೆಗೆದುಕೊಂಡರು. ಕರೆನ್ಸಿ ನೋಟುಗಳಲ್ಲಿ ರೂ.2 ಸಾವಿರ, ರೂ.500, ರೂ.100 ಮತ್ತು ರೂ.10 ನೋಟುಗಳು ಸೇರಿವೆ. ಜನರು ಕೊಳಕು ಕಾಲುವೆಗೆ ಇಳಿದು ನೋಟುಗಳ ಕಟ್ಟುಗಳನ್ನು ಸಂಗ್ರಹಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದಕ್ಕೆ ಸ್ಥಳೀಯರು ಸ್ಪಂದಿಸಿದರು. ಬೆಳಗ್ಗೆ ಕೊಳಕು ಕಾಲುವೆಯಲ್ಲಿ ಎರಡು ಚೀಲಗಳು ಪತ್ತೆಯಾಗಿವೆ. ಅದರಲ್ಲಿ ಕರೆನ್ಸಿ ನೋಟುಗಳಿವೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಲುವೆಗೆ ಹಾರಿ ನೋಟುಗಳ ಕಂತೆಗಳನ್ನು ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಸಲಿ.. ಕರೆನ್ಸಿ ನೋಟು ಅಸಲಿಯೇ? ನಕಲಿಯೇ? ಒರಿಜಿನಲ್ ನೋಟುಗಳೇ ಆಗಿದ್ದರೆ ಆ ಹಣವನ್ನು ಚರಂಡಿಗೆ ಎಸೆದವರು ಯಾರು? ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!