ನಂದಿನಿ ತುಪ್ಪಕ್ಕೆ ಭರ್ಜರಿ ಡಿಮ್ಯಾಂಡ್: ತಿಮ್ಮಪ್ಪನ ಸನ್ನಿಧಿಗೆ ತುರ್ತು ಎರಡು ಸಾವಿರ ಟನ್‌ ಸಪ್ಲೈ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕರ್ನಾಟಕದ ಕೆಎಂಎಫ್ (KMF) ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಯುಗಾದಿಗೆ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಟಿಟಿಡಿ ಮನವಿ ಮಾಡಿದೆ.

ತಿರುಪತಿಯಲ್ಲಿ ಈ ಹಿಂದೆ ಬೇರೆ ಬ್ರ‍್ಯಾಂಡ್ ತುಪ್ಪ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಆದರೆ ಇದೀಗ ಲಡ್ಡು ತಯಾರಿಕೆಗಾಗಿ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸುತ್ತಿದ್ದು, ಇದರ ಹೊರತಾಗಿ ಬೇರೆ ಯಾವುದೇ ತುಪ್ಪವನ್ನು ಬಳಸುತ್ತಿಲ್ಲ. ಸದ್ಯ ಯುಗಾದಿ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಲಡ್ಡು ತಯಾರಿಕೆಗಾಗಿ ತುರ್ತು 2 ಸಾವಿರ ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಟಿಟಿಡಿ (TTD) ಕೆಎಂಎಫ್‌ಗೆ ಸೂಚಿಸಿದ್ದು, ಈ ತಿಂಗಳಲ್ಲಿ ಸಪ್ಲೈ ಮಾಡುವಂತೆ ತಿಳಿಸಿದೆ.

ಈ ಮೊದಲು ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. ಈ ವರ್ಷ 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್‌ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!