ಯಾರೂ ಕೂಡ ಮಗಳ ಫೋಟೋ ತೆಗೆಯಬಾರದು: ಖಡಕ್ ಎಚ್ಚರಿಕೆ ನೀಡಿದ ರಣಬೀರ್, ಆಲಿಯಾ ಭಟ್!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೆಲೆಬ್ರಿಟಿಗಳ ಹಿಂದೆ ಪಾಪರಾಜಿಗಳು ಇದ್ದೇ ಇರುತ್ತಾರೆ.ಅವರು ಎಲ್ಲಿಯೇ ಹೋದರೂ ಮುತ್ತಿಕೊಳ್ಳುತ್ತಾರೆ.

ಈಗ ಈಗ ಸೆಲೆಬ್ರಿಟಿಗಳ ಮಕ್ಕಳ ಮೇಲೂ ಪಾಪರಾಜಿಗಳ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ದಂಪತಿಯ ಮಗಳು ರಹಾ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾರ್ಚ್​ 15ರಂದು ಆಲಿಯಾ ಭಟ್ ಅವರ ಹುಟ್ಟುಹಬ್ಬ. ಎರಡು ದಿನ ಮುಂಚಿತವಾಗಿಯೇ ಮಾಧ್ಯಮ ಪ್ರತಿನಿಧಿಗಳು ಹಾಗೂ ಪಾಪರಾಜಿಗಳ ಜೊತೆ ಆಲಿಯಾ ಭಟ್ ಅವರು ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ವೇಳೆ ಆಲಿಯಾ ಮತ್ತು ರಣಬೀರ್ ಕಪೂರ್ ಅವರು ಮಗಳ ಬಗ್ಗೆ ಒಂದು ಮನವಿ ಮಾಡಿದ್ದಾರೆ. ಯಾರೂ ಕೂಡ ತಮ್ಮ ಮಗಳ ಫೋಟೋ ತೆಗೆಯಬಾರದು ಮತ್ತು ಅನಧಿಕೃತವಾಗಿ ಬಳಸಬಾರದು ಎಂದು ಅವರು ಹೇಳಿದ್ದಾರೆ.

ಈ ಮನವಿಯನ್ನು ಎಲ್ಲರೂ ಪರಿಗಣಿಸುತ್ತಾರೆ ಎಂಬ ನಂಬಿಕೆ ಅವರಿಗೆ ಇದೆ. ಒಂದು ವೇಳೆ ಕೆಲವರು ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ಆಲಿಯಾ ಭಟ್, ರಣಬೀರ್ ಕಪೂರ್ ಅವರು ವಿಮಾನ ನಿಲ್ದಾಣದಂತಹ ಜಾಗಗಳಲ್ಲಿ ಕಾಣಿಸಿಕೊಂಡಾಗ ಅವರ ಜೊತೆ ಪುತ್ರಿ ಕೂಡ ಇರುತ್ತಾಳೆ. ಆಕೆಗೆ ಈಗಿನ್ನೂ 2 ವರ್ಷ ವಯಸ್ಸು. ಮಗಳು ಅಲ್ಲಿಂದ ದಾಟಿ ಹೋಗುವ ತನಕ ಅಥವಾ ಆಕೆಯ ಮುಖ ಮುಚ್ಚಿಕೊಳ್ಳುವ ತನಕ ಪಾಪರಾಜಿಗಳು ಕಾಯಬೇಕು ಎಂದು ಆಲಿಯಾ ಹೇಳಿದ್ದಾರೆ. ಮಗಳ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ರಹಾ ಹೆಸರನ್ನು ಪಾಪರಾಜಿಗಳು ಜೋರಾಗಿ ಕೂಗಿದ್ದರು. ಆಗ ಪಾಪರಾಜಿಗಳ ಕಡೆಗೆ ರಹಾ ಕೈ ಬೀಸಿದಳು. ಆ ಕ್ಷಣ ತುಂಬ ಕ್ಯೂಟ್ ಆಗಿತ್ತು. ಆದರೆ ಎಲ್ಲ ಸಂದರ್ಭ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಮಗಳನ್ನು ಪಾಪರಾಜಿಗಳ ಕ್ಯಾಮೆರಾ ಕಣ್ಣಿನಿಂದ ದೂರ ಇಡಲು ಈ ದಂಪತಿ ನಿರ್ಧರಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!