ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ದೋಸೆ ಇಡ್ಲಿ ಹಿಟ್ಟಿಗೆ ಜನ ಫಿದಾ ಆಗಿದ್ದಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಮೂರು ದಿನಗಳಲ್ಲಿ ದಾಖಲೆಯ ಮಾರಾಟ ಸಾಧಿಸಲಾಗಿದೆ.
ಕಳೆದ 2-3 ದಿನಗಳಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗಿದೆ ಏಕೆಂದರೆ ಇದರಲ್ಲಿ 5% ವೇ ಪ್ರೋಟೀನ್ ಇದೆ. ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೆ ಖರೀದಿಸಲು ಬರುತ್ತಿದ್ದಾರೆ. ಇದಕ್ಕೆ ಸ್ಪಂದಿಸಿದ ಕೆಎಂಎಫ್ ಹೆಚ್ಚಿನ ಸರಬರಾಜು ಪೂರೈಸಲು ಸಿದ್ಧವಾಗಿದೆ.
ಪ್ರಸ್ತುತ, ಇಡ್ಲಿ ಹಿಟ್ಟು ವಿತರಣೆಗಾಗಿ 5-6 ವಾಹನಗಳನ್ನು ನಿಯೋಜಿಸಲಾಗಿದೆ. ಕೆಎಂಎಫ್ ಶೀಘ್ರದಲ್ಲೇ 18 ವಾಹನಗಳನ್ನು ಖರೀದಿಸಿ ಸಾರ್ವಜನಿಕ ಬೇಡಿಕೆಗೆ ಅನುಗುಣವಾಗಿ ವಿತರಿಸಲು ಯೋಜಿಸಿದೆ.