ಶಿಗ್ಗಾಂವಿಯಲ್ಲಿ ಪಠಾಣಗೆ ಭರ್ಜರಿ ಗೆಲುವು, ‘ಕೈ’ ಕಾರ್ಯಕರ್ತರ ಸಂಭ್ರಮಾಚರಣೆ

ಹೊಸದಿಗಂತ ಹಾವೇರಿ:

ಶಿಗ್ಗಾಂವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಯಾಸಿರ್ ಖಾನ್ ಪಠಾಣ ಗೆಲುವಿನ ನಗೆ ಬೀರಿದ್ದಾರೆ.

ಯಾಸಿರ್ ಖಾನ್ ಪಠಾಣ 100587 ಮತ ಪಡೆದರೆ ಬಿಜೆಪಿಯ ಭರತ್ ಬೊಮ್ಮಾಯಿ 86960 ಮತ ಪಡೆದು ನಿರಾಸೆ ಅನುಭವಿಸಿದರು. 13448 ಮತಗಳಿಂದ ಕಾಂಗ್ರೆಸ್ ನ ಯಾಸಿರ್ ಖಾನ್ ಪಠಾಣ ಗೆಲುವಿನ ಕೇಕೇ ಹಾಕಿದರು.

ಮತ ಎಣಿಕೆ ಕೇಂದ್ರದ ಹೊರಗೆ ಕೈ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ಕಾರ್ಯಕರ್ತರು ಖಾದ್ರಿ… ಖಾದ್ರಿ…. ಪಠಾಣ ಪಠಾಣ ಎಂಬ ಘೋಷಣೆ ಕೂಗಿ, ಗುಲಾಲು ಎರಚಿ ಸಂಭ್ರಮಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!