ಕಾಂಗ್ರೆಸ್​ಗೆ ಜಗದೀಶ್ ಶೆಟ್ಟರ್ ಬಂದ್ರೆ ಹುಬ್ಬಳ್ಳಿ ಸೆಂಟ್ರಲ್ ಟಿಕೆಟ್ ಫಿಕ್ಸ್: ಶಾಮನೂರು ಶಿವಶಂಕರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಗೆ ಬಂದರೆ ಹುಬ್ಬಳಿ ಸೆಂಟ್ರಲ್ ಟಿಕೆಟ್ ಫಿಕ್ಸ್ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ಬೀಗರು. ಅವರನ್ನು ನಮ್ಮ ಮಗ ಪಕ್ಷಕ್ಕೆ ಕರೆಯುತ್ತಾನೆ. ಅವರು ಕಾಂಗ್ರೆಸ್‌ ಗೆ ಬಂದರೆ ಹುಬ್ಬಳಿ ಸೆಂಟ್ರಲ್ ಟಿಕೆಟ್ ಫಿಕ್ಸ್ ಎಂದರು.

ಜಗದೀಶ್ ಶೆಟ್ಟರ್ ನಮ್ಮ ಬೀಗರು. ನಾನು ಅವರನ್ನು ಪಕ್ಷಕ್ಕೆ ಬರುವಂತೆ ಅವರ ಜೊತೆ ಮಾತನಾಡಿಲ್ಲ. ಟಿಕೆಟ್ ಸಿಗದ ಕಾರಣಕ್ಕೆ ಅವರು ಕಾಂಗ್ರೆಸ್‌ ಗೆ ಬರಬಹುದು. ಬಿಜೆಪಿಯವರು ಇಂತಹ ಕೆಲಸ ಮಾಡಿಯೇ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಬಿಜೆಪಿಗೆ 60 ಸೀಟ್ ಸಹ ಬರೋಲ್ಲ ಎಂದು ಭವಿಷ್ಯ ನುಡಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಗೆ ಬಂದರೆ ನಾವು ಅವರಿಗೆ ಟಿಕೆಟ್ ಕೊಡಲೇಬೇಕಾಗುತ್ತದೆ. ಟಿಕೆಟ್ ಕೊಟ್ಟರೆ ಅವರು ಕಾಂಗ್ರೆಸ್ ಸೇರುವುದು ಪಕ್ಕ. ಆದ್ದರಿಂದ ನಮ್ಮ ಮಗ ಅವರ ಬೀಗರು (ಜಗದೀಶ್ ಶೆಟ್ಟರ್) ಕಾಂಗ್ರೆಸ್‌ ಗೆ ಬರುವಂತೆ ಮಾತನಾಡುತ್ತಿದ್ದಾರೆ. ಕಾದು ನೋಡೋಣ ಎಂದರು.

ಜಗದೀಶ್ ಶೆಟ್ಟರ್ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಲಿಂಗಾಯತ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಬಂಪರ್ ಹೊಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!