Thursday, September 11, 2025

ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ನೂರಾರು ಜಾನುವಾರುಗಳ ಮೂಳೆ, ಅಸ್ಥಿಪಂಜರ ಪತ್ತೆ


ಹೊಸದಿಗಂತ ಭಟ್ಕಳ:

ಇಲ್ಲಿನ ಪುರಸಭೆ ವ್ಯಾಪ್ತಿ ಮುಗ್ದೂಂ ಕಾಲೋನಿಯ ಗುಡ್ಡದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ನೂರಾರು ಜಾನುವಾರುಗಳ ಮೂಳೆಗಳು ಮತ್ತು ಅಸ್ಥಿಪಂಜರಗಳು ರಾಶಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳಕ್ಕೆ ಪೊಲೀಸ್ ಮತ್ತಿತರ ಅಕಾರಿಗಳ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.


ಅರಣ್ಯ ಇಲಾಖೆಗೆ ಸೇರಿದ ಮುಗ್ದೂಮ್ ಕಾಲೋನಿಯ ಗುಡ್ಡ ಪ್ರದೇಶದಲ್ಲಿ ನೂರಾರು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಕಳೆದ ಹಲವು ದಿನಗಳಿಂದ ಇಲ್ಲೇ ಜಾನುವಾರು ಹತ್ಯೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಯ ಯುವಕರು ಮೂಳೆಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.


ಮುಗ್ದೂಂ ಕಾಲೋನಿಯ ಗುಡ್ಡದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆ ನಡೆದರೂ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಲಿಲ್ಲವೇ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಜಯಂತ ನಾಯ್ಕ ಬೆಣಂದೂರು ಅವರು ಘಟನೆ ಮುಚ್ಚಿ ಹೋಗುವ ಮುನ್ನ ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ