ಎಲ್ಲರಿಗಿಂತ ಮೊದಲು, ಈ ಪುಟ್ಟ ರಾಷ್ಟ್ರ ಕೊಡ್ತಿದೆ ನಾಲ್ಕನೇ ಡೋಸ್‌ ಕೋವಿಡ್‌ ಲಸಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಡೀ ವಿಶ್ವವೇ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಭಾರತ, ಅಮೆರಿಕ ಸೇರಿದಂತೆ ಎಲ್ಲಾ ರಾಷ್ಟ್ರಗಳು ಬೂಸ್ಟರ್‌ ಡೋಸ್‌ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ಈ ಪುಟ್ಟ ರಾಷ್ಟ್ರ ಮಾತ್ರ ನಾಲ್ಕನೇ ಡೋಸ್ ಲಸಿಕೆ ಕೊಡೋಕೆ ಮುಂದಾಗಿದೆ.
ಹೌದು ಹಂಗೇರಿ ಸರ್ಕಾರ ಈಗ ನಾಲ್ಕನೇ ಡೋಸ್‌ ಲಸಿಕೆ ನೀಡುತ್ತಿದೆ. ಇಲ್ಲಿನ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರಿಗೆ ಹಂಗೇರಿ ಸರ್ಕಾರ ನಾಲ್ಕನೇ ಡೋಸ್‌ ಲಸಿಕೆ ನೀಡಲಾರಂಭಿಸಿದೆ. ಈಗಾಗಲೇ 30ಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ.
ಹಂಗೇರಿಯಲ್ಲಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಯ ನಾಲ್ಕನೇ ಡೋಸ್‌ ನೀಡಲಾಗುತ್ತದೆ.
ಹಂಗೇರಿಯಲ್ಲಿ ಒಟ್ಟು ಜನಸಂಖ್ಯೆಯೇ 97 ಲಕ್ಷ ಇದ್ದು, ಇದರಲ್ಲಿ 13.3 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರು. ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗುತ್ತಿದ್ದನ್ನು ಕಂಡ ಸರ್ಕಾರ ಕೋವಿಡ್‌ ಲಸಿಕೆಯ ನಾಲ್ಕನೇ ಡೋಸ್‌ ನೀಡಿಕೆಗೆ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!