ಹೊಸದಿಗಂತ ವರದಿ,ಮಡಿಕೇರಿ:
ಗಂಡ ಹೆಂಡಿರ ನಡುವಿನ ಜಗಳದಲ್ಲಿ ಗಂಡ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಮೂರ್ನಾಡುವಿನ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ಪದ್ಮಿನಿ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಧರ್ಮ(26) ಎಂಬವರನ್ನು ಪತ್ನಿ ಶ್ರೀಜಾ (24) ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ಕಳೆದ 10 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಧರ್ಮ ಭಾನುವಾರ ಬೆಳಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸಂದರ್ಭ ಪತ್ನಿ ಶ್ರೀಜಾ ತನ್ನ ಕೈಲಿದ್ದ ಚಾಕುವಿನಿಂದ ಗಂಡನನ್ನು ತಿವಿದ ಪರಿಣಾಮ ಧರ್ಮ ಮೃತಪಟ್ಟಿದ್ದಾರೆನ್ನಲಾಗಿದೆ.
ಧರ್ಮ, ಕುಶಾಲನಗರ ಮೂಲನವನಾಗಿದ್ದು, ಶ್ರೀಜಾ ಬೈರಂಬಾಡದ ನಿವಾಸಿಯಾಗಿದ್ದಾರೆ. ಇಬ್ಬರೂ ಪ್ರೀತಿಸಿ ವಿವಾಹದ ನಂತರ ಮೂರ್ನಾಡಿನ ಗಾಂಧಿನಗರದಲ್ಲಿ ವಾಸವಾಗಿದ್ದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಕೆ.ಎಸ್. ಸುಂದರ್ ರಾಜ್, ಡಿವೈಎಸ್ಪಿ ಮಹೇಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪರಗಿ, ಮೂರ್ನಾಡು ಪೊಲೀಸ್ ಠಾಣೆಯ ಎ.ಎಸ್. ಐ ಶ್ರೀನಿವಾಸ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಶ್ರೀಜಾರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.