ಹೊಸ ದಿಗಂತ ಡಿಜಿಟಲ್ ಡೆಸ್ಕ್;
ತಲೆಯಲ್ಲಿ ಕೂದಲಿಲ್ಲ ಎಂದು ಕಿರುಕುಳ ನೀಡುತ್ತಿದ್ದ ಪತ್ನಿಯ ಕಾಟಕ್ಕೆ ಬೇಸತ್ತು, ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಉಡಿಗಾಲದ ಪರಶಿವಮೂರ್ತಿ(32) ಎಂಬುವರೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
2 ವರ್ಷಗಳ ಹಿಂದೆ ಪರಶಿವಮೂರ್ತಿ ಅವರು ಕೆಳಕಿಪುರದ ಮಮತಾ ಎಂಬುವರೊಂದಿಗೆ ವಿವಾಹವಾಗಿದ್ದರು. ಪರಶಿವಮೂರ್ತಿಯ ತಲೆ ಕೂದಲು ಮದುವೆ ನಂತ್ರ ಉದುರಿತ್ತು. ಇದರಿಂದಾಗಿ ಪತ್ನಿ ಮಮತಾ ದಿನಾಲೂ ತಲೆಯಲ್ಲಿ ಕೂದಲಿಲ್ಲ ಎಂಬುದಾಗಿ ಕಿರುಕುಳ ನೀಡುತ್ತಿದ್ದಳು . ತಲೆಯಲ್ಲಿ ಕೂದಲಿಲ್ಲದ ಪರಶಿವಮೂರ್ತಿಯನ್ನು ಗಂಡ ಅನ್ನುವುದಕ್ಕೂ ಅವಮಾನ ಆಗುತ್ತದೆ. ಹೊರಗೆ ಹೋಗೋದಕ್ಕೂ ನನಗೆ ನಾಚಿಕೆ ಆಗುತ್ತದೆ ಎಂಬುದಾಗಿ ಅಪಹಾಸ್ಯ ಮಾಡುತ್ತಿದ್ದಳಂತೆ. ಇದಲ್ಲದೇ ತಾಳಿಯನ್ನು ತೆಗೆದಿಟ್ಟಿರುವ ಪೋಟೋವನ್ನು ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದಳಂತೆ. ಈ ವಿಚಾರಕ್ಕಾಗಿ ಪರಶಿವಮೂರ್ತಿ ಹಾಗೂ ಮಮತಾ ನಡುವೆ ಜಗಳ ಕೂಡ ಆಗಿತ್ತು.
ಇದಷ್ಟೇ ಅಲ್ಲದೇ ಪರಶಿವಮೂರ್ತಿ ವಿರುದ್ಧ ಮಮತಾ ವರದಕ್ಷಿಣೆ ಕೇಸ್ ಹಾಕಿದ್ದಳಂತೆ. ಹೀಗಾಗಿ ಈ ಎಲ್ಲಾ ವಿಚಾರಕ್ಕೆ ಬೇಸತ್ತು ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.