ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ: ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದನು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದ (Uttara Pradesh) ಗಾಜಿಯಾಬಾದ್‍ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು (Lover) ಕೊಂದು ಆತನ ದೇಹವನ್ನು 12ಕ್ಕಿಂತಲೂ ಹೆಚ್ಚು ಪೀಸ್‍ಗಳನ್ನಾಗಿ ಮಾಡಿದ ಘಟನೆ ನಡೆದಿದೆ.

ಮೀಲಾಲ್ ಪ್ರಜಾಪತಿ ಎಂಬಾತನ ಪತ್ನಿಯು (Wife) ಗಾಜಿಯಾಬಾದ್ ನಿವಾಸಿ ಅಕ್ಷಯ್‍ನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು.

ಮೀಲಾಲ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಅಕ್ಷಯ ಆತನ ಮನೆಗೆ ಭೇಟಿ ನೀಡಿದ್ದ. ಅಷ್ಟೇ ಅಲ್ಲದೇ ಮೀಲಾಲ್ ಪತ್ನಿ ನೀಡಿದ್ದ ಚಹಾವನ್ನು ಕುಡಿಯುತ್ತಿರುವಾಗ, ಮಿಲಾಲ್‍ನ ಮಗಳ ಕಾಲಿಗೆ ಕುದಿಯುತ್ತಿರುವ ಚಹಾ ಬಿದ್ದಿದೆ. ಇದರಿಂದಾಗಿ ಆಕೆಗೆ ಸುಟ್ಟಗಾಯಗಳಾಗಿದ್ದವು. ಇದನ್ನು ಕಂಡ ಮಿಲಾಲ್ ಮಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಸುಟ್ಟಗಾಯಗಳು ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವೇಳೆ ಪತ್ನಿಯ ಅಕ್ರಮ ಸಂಬಂಧ ಜೊತೆಗೆ ಮಗಳಿಗೆ ತೊಂದರೆ ಆಗಿರುವುದನ್ನು ಗಮನಿಸಿದ ಮಿಲಾಲ್ ಕೋಪಗೊಂಡು ಅಕ್ಷಯ್‍ನನ್ನು ಹತ್ಯೆ ಮಾಡಲು ಯೋಜಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಯೋಜನೆಯಂತೆ ತನ್ನ ಪತ್ನಿ ಬಳಿ ಅಕ್ಷಯನನ್ನು ಮನೆಗೆಲಸದಲ್ಲಿ ಸಹಾಯ ಮಾಡಲು ಕರೆ ಮಾಡುವಂತೆ ತಿಳಿಸಿದ್ದಾನೆ.ಅಕ್ಷಯ್ ಮನೆಗೆ ಬಂದಾಗ ಮೀಲಾಲ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ದೇಹವನ್ನು ಕತ್ತರಿಸಿ, ಆ ಭಾಗಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಗಾಜಿಯಾಬಾದ್‍ನ ಕಸದ ರಾಶಿಗೆ ಎಸೆದಿದ್ದಾನೆ.

ಕಸದ ರಾಶಿಯಲ್ಲಿ ದೇಹದ ಭಾಗಗಳನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!