ಗಂಡನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಆತ್ಮಹತ್ಯೆ

ದಿಗಂತ ವರದಿ ರಾಮನಗರ:

ಗಂಡನ ಕಿರುಕುಳಕ್ಕೆ ಬೇಸತ್ತು ಐದು ತಿಂಗಳ ಗರ್ಭಿಣಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಮನಗರ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ರಾಮನಗರದ ಮಂಜುನಾಥನಗರ ಬಡಾವಣೆಯ ನಿವಾಸಿ ಜಾಹ್ನವಿ (23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ.
ಈಕೆ 9 ತಿಂಗಳ ಹಿಂದೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ವ್ಯಕ್ತಿ ಕರ್ಣ ಎಂಬಾತನನ್ನು ಮದುವೆಯಾಗಿದ್ದಳು.

ಲಗ್ನದ ಬಳಿಕ ಹಾಗಿರಬೇಕು ಹೀಗಿರಬೇಕು ಎಂಬ ಈಕೆಯ ಕನಸುಗಳೆಲ್ಲ ಕೆಲವೇ ತಿಂಗಳಲ್ಲಿ ಭಗ್ನಗೊಂಡಿವೆ. ಪತಿಯ ಹಿಂಸೆ ತಾಳಲಾರದೆ ಒಂದು ತಿಂಗಳ ಹಿಂದೆ ಈಕೆ ತವರು ಮನೆಗೆ ಬಂದಿದ್ದಳು.
ಅದಾಗ್ಯೂ ಪತಿ ತವರು ಮನೆಗೆ ಕರೆ ಮಾಡಿ ದೂರದಿಂದಲೇ ಪೀಡಿಸುತ್ತಿದ್ದ. ಇದರಿಂದೆಲ್ಲ ತೀವ್ರ ನೊಂದಿದ್ದ ಜಾಹ್ನವಿ, ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ಪತಿ ಹೊಡೆದು ಬಡಿದು ಹಿಂಸೆ ಕೊಡುತ್ತಿದ್ದ ಎಂದು ಜಾಹ್ನವಿ ಪಾಲಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಐಜೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!