ಕೋರ್ಟ್ ನಲ್ಲೇ ಪತ್ನಿಯ ಮೇಲೆ ಆಯಸಿಡ್ ಎರಚಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಕೊಯಂಬತ್ತೂರಿನಲ್ಲಿ ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಿದ್ದ ಪತ್ನಿ ಮೇಲೆ ಪತಿಯೇ ಆಯಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.

ಕೊಯಂಬತ್ತೂರಿನ ರಾಮನಾಥಪುರಂನ ಕಾವೇರಿ ನಗರದ 33 ವರ್ಷದ ಕವಿತಾ 2016 ರಲ್ಲಿ ಬಸ್ ಪ್ರಯಾಣಿಕರೊಬ್ಬರ ಚೈನ್ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದಳು, ಜಾಮೀನಿನ ಮೇಲೆ ಹೊರಗಿದ್ದಳು. ಆಕೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬರುತ್ತಿದ್ದಳು. ಅವಳು ತನ್ನ ಇಬ್ಬರು ಮಕ್ಕಳು ಮತ್ತು ಪತಿ ಶಿವನಿಂದ ದೂರವಾಗಿ ವಾಸಿಸುತ್ತಿದ್ದಳು, ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದಳು. ಗುರುವಾರ, ಕವಿತಾ ಪ್ರಕರಣದ ವಿಚಾರಣೆಗಾಗಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿದ್ದಳು, ಆಕೆಯನ್ನು ಹಿಂಬಾಲಿಸಿದ ಪತಿ ಶಿವ ಕೋರ್ಟ್ ಕಾರಿಡಾರ್ನಲ್ಲಿ ಕಾಯುತ್ತಿದ್ದಾಗ ಇಬ್ಬರು ಜಗಳಕ್ಕಿಳಿದ್ದಾರೆ.

ಈ ವೇಳೆ ಶಿವ ತಾನು ಬಚ್ಚಿಟ್ಟಿದ್ದ ಪ್ಲಾಸ್ಟಿಕ್ ಬಾಟಲಿಯಿಂದ ಕವಿತಾ ಮೇಲೆ ಆಸಿಡ್ ಸುರಿದಿದ್ದಾನೆ. ಕವಿತಾ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲಿದ್ದ ವಕೀಲರು ದಾಳಿಯನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಶಿವನನ್ನು ಥಳಿಸಿದ ವಕೀಲರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕವಿತಾ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!