ಡ್ರಗ್ಸ್​ ಮತ್ತಿನಲ್ಲಿ ಪತ್ನಿ ತಲೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರಗ್ಸ್​ ಚಟಕ್ಕೆ ದಾಸನಾಗಿದ್ದ ಪತಿ, ಅದರ ಮತ್ತಿನಲ್ಲಿ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತ್ನಿಯೊಬ್ಬರು ಬೆಂಗಳೂರಿನ ಬಸವನಗುಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ತೆಲಂಗಾಣದ ಪ್ರತಿಷ್ಠಿತ ಬಟ್ಟೆ ಕಂಪನಿಯ ಮಾಲೀಕರ ಮಗಳನ್ನು ಸಂದೀಪ್ ಎಂಬುವರಿಗೆ ಕಳೆದ ಜನವರಿಯಲ್ಲಿ ವಿವಾಹ ಮಾಡಿಕೊಡಲಾಗಿತ್ತು‌. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ 4 ಕೆ.ಜಿ ಚಿನ್ನ, ಮಿನಿ‌ಕೂಪರ್ ಕಾರನ್ನು ಸಂದೀಪ್​ಗೆ ವರದಕ್ಷಿಣೆಯಾಗಿ ನೀಡಲಾಗಿತ್ತು. ವಿವಾಹಕ್ಕಾಗಿ 6 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

ಇದಲ್ಲದೇ, ತೆಲಂಗಾಣದಲ್ಲಿರುವ 2 ಜವಳಿ ಅಂಗಡಿಗಳನ್ನೂ ಕೂಡ ಸಂದೀಪ್ ಹೆಸರಿಗೆ ಬರೆದುಕೊಡಲಾಗಿತ್ತು. ಆದರೆ, ಸಂದೀಪ್ ಮಾತ್ರ ದುಶ್ಚಟಕ್ಕೆ ದಾಸನಾಗಿದ್ದು, ಮನೆಗೆ ಸ್ನೇಹಿತರನ್ನು ಕರೆಸಿಕೊಂಡು ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದರು.

ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದರೆ ಗೆಳೆಯರ ಮುಂದೆಯೇ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ಬಳಿಕ ಅಶ್ಲೀಲವಾಗಿ ವರ್ತಿಸುತ್ತಿದ್ದರು ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದೆ ಡ್ರಗ್ಸ್​ ಸೇವಿಸಿದ ತನ್ನ ಪತಿ ನಶೆಯಲ್ಲಿ ನನ್ನ ತಲೆಯ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!