ಸಹ ನಟಿ ಜೊತೆ ಪತಿಯ ಲವ್ವಿ-ಡವ್ವಿ: ನಡುರಸ್ತೆಯಲೇ ಥಳಿಸಿದ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಕೃತಿ ಮಿಶ್ರಾ ಮೇಲೆ ಮಹಿಳೆಯೊಬ್ಬರು ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ.
ನಟ ಬಾಬುಸನ್ ಮೊಹಂತಿ ಮತ್ತು ಸಹ ನಟಿ ಪ್ರಕೃತಿ ಮಿಶ್ರಾ ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದನ್ನು ಪತ್ನಿ ತೃಪ್ತಿ ರೆಡ್ ಹ್ಯಾಂಡ್ ಆಗಿ ಹಿಡಿದು ನಡುರಸ್ತೆಯಲ್ಲೇ ಥಳಿಸಿದ್ದಾರೆ.

ಇದೀಗ ಪತ್ನಿ ಮಧ್ಯರಸ್ತೆಯಲ್ಲೇ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಡಿಶಾದ ಜನನಿಬಿಡ ಭುವನೇಶ್ವರ ರಸ್ತೆಯಲ್ಲಿ ಜಗಳವಾಡಿದ್ದಾರೆ. ನಟ ಬಾಬುಸನ್ ಮೊಹಂತಿ ಮತ್ತು ಸಹ ನಟಿ ಪ್ರಕೃತಿ ಮಿಶ್ರಾ ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಹೋಗುತ್ತಿದ್ದರು. ಅವರನ್ನೇ ಫಾಲೋ ಮಾಡಿಕೊಂಡು ಬಂದ ಪತ್ನಿ ತೃಪ್ತಿ ನಡುರಸ್ತೆಯಲ್ಲೇ ಕಾರನ್ನು ತಡೆದು ನಿಲ್ಲಿಸಿ ತನ್ನ ಪತಿಯ ಪಕ್ಕದಲ್ಲಿ ಕಾರಿನಲ್ಲಿ ಕುಳಿತಿದ್ದ ನಟಿ ಪ್ರಕೃತಿಯನ್ನು ಕೂದಲು ಹಿಡಿದು ಕೆಳಗೆ ಎಳೆದು ಹಾಕಿದ್ದಾರೆ. ಬಳಿಕ ಗಂಡನನ್ನು ತರಾಟೆ ತೆಗೆದುಕೊಂಡರು. ಈ ವಿಷಯ ಭುವನೇಶ್ವರದ ಖರವೇಲ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಕೃತಿಯ ಕೂದಲನ್ನು ಎಳೆಯಲು ಪ್ರಯತ್ನಿದರು. ಆಟೋ ರಿಕ್ಷಾವನ್ನು ಹತ್ತದಂತೆ ತಡೆದು ತನ್ನ ಕುಟುಂಬವನ್ನು ಹಾಳುಮಾಡಿದ್ದಾಳೆ ಎಂದು ಕೂಗಾಡಿದರು. ತೃಪ್ತಿ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ ಎಂದು ಪ್ರಕೃತಿ ಸಹ ಕೂಗಾಡಿದರು.

ನಟ ಬಾಬುಶಾನ್ ಇತ್ತೀಚಿಗಷ್ಟೆ ಒಡಿಯಾದ ಪ್ರೇಮಂ ಸಿನಮಾದಲ್ಲಿ ಪ್ರಕೃತಿಯೊಂದಿಗೆ ತೆರೆಹಂಚಿಕೊಂಡಿದ್ದರು.
ಒಡಿಶಾ ಸಿನಿಮಾ , ಹಿಂದಿ ಕಿರುತೆರೆಯಲ್ಲಿ ನಟಿ ಪ್ರಕೃತಿ ಮಿಶ್ರಾ ನಟಿಸಿದ್ದರು. ಇತ್ತ ನಟ ಬಾಬುಸನ್ ಮೊಹಂತಿ ಒಡಿಶಾ ನಟ ಮತ್ತು ಗಾಯಕರಾಗಿದ್ದಾರೆ. ‘ಹಲೋ ಆರ್ಸಿ’ ಚಿತ್ರದ ನಟನೆಗಾಗಿ ಪ್ರಕೃತಿ ಮಿಶ್ರಾ ೬೫ನೇ ರಾಷ್ಟ್ರ ಪ್ರಶಸ್ತಿಯಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ಪಡೆದುಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!