ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಾಲಾಪರಾಧಿಗಳನ್ನೂ ಕೂಡ ವಯಸ್ಕರಂತೆ ವಿಚಾರಣೆ ನಡೆಸಬೇಕು ಎಂದು ಹೈದರಾಬಾದ್ ಪೋಲೀಸರು ನ್ಯಾಯಾಂಗಕ್ಕೆ ಮನವಿ ಮಾಡಲಿದ್ದಾರೆ. ಅವರ ಈ ಮನವಿಯನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಬಾಲ ನಾಯಮಂಡಳಿಗೆ ಬಿಟ್ಟ ವಿಚಾರವಾಗಿದೆ.
ಈ ಕುರಿತು ಹೈದರಾಬಾದ್ ಪೋಲೀಸ್ ಕಮೀಷನರ್ ಸಿವಿ ಆನಂದಸಿಂಗ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಪ್ರಕರಣದಲ್ಲಿ ಒಟ್ಟು ಆರುಮಂದಿ ಆರೋಪಿಗಳಿದ್ದು ಅವರಲ್ಲಿ ನಾಲ್ವರು ಅಪ್ರಾಪ್ತರಾಗಿದ್ದಾರೆ. ಎಲ್ಲರೂ ಕೂಡ ಪ್ರಭಾವಿ ರಾಜಕೀಯ ಕುಟುಂಬಗಳಿಂದ ಬಂದವರು ಅಥವಾ ನಿಕಟ ರಾಜಕೀಯ ಸಂಪರ್ಕ ಹೊಂದಿರುವವರು ಎನ್ನಲಾಗಿದೆ. ಆರೋಪಿಗಳ ವಿವರ ಹೀಗಿದೆ
ಬಂಧಿತರಾಗಿರುವ ವಯಸ್ಕ ಆರೋಪಿಗಳು –
-ಒಮರ್ ಖಾನ್ : ರಾಜಕೀಯ ಸಂಪರ್ಕ ಹೊಂದಿರುವ ಶ್ರೀಮಂತ ಕುಟುಂಬದವನು ಎನ್ನಲಾಗಿದೆ.
-ಸಾದುದ್ದೀನ್ ಮಲಿಕ್ : ಸ್ಥಳೀಯ ಟಿಆರ್‌ಎಸ್ ಮುಖಂಡನ ಮಗ ಎನ್ನಲಾಗಿದೆ.
ಬಾಲ ಆರೋಪಿಗಳು –
-ಟಿಆರ್‌ಎಸ್ ಮುಖಂಡರ ಪುತ್ರ
-ಜಿಎಚ್‌ಎಂಸಿ ಕಾರ್ಪೊರೇಟರ್ ಪುತ್ರ
-ಸಂಗಾರೆಡ್ಡಿಯ ಟಿಆರ್‌ಎಸ್ ಕಾರ್ಪೊರೇಟರ್ ಪುತ್ರ
-ಎಐಎಂಐಎಂ ಶಾಸಕರ ಪುತ್ರ – ಈತನ ಆಧಾರ್ ವಿವರಗಳ ಪ್ರಕಾರ ಜುಲೈ 7ರಂದು ಆತ 18 ನೇ ವಯಸ್ಸಿಗೆ ಕಾಲಿಡಲಿದ್ದಾನೆ.