ಕ್ಷಮಾ ಬಿಂದುವಿನೊಂದಿಗೆ ‘ವೈವಾಹಿಕ’ ಜೀವನ’ಕ್ಕೆ ಕಾಲಿರಿಸಿದ ಕ್ಷಮಾ ಬಿಂದು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಿಗದಿತ ಸಮಯಕ್ಕಿಂತಲೂ ಎರಡು ದಿನ ಮುಂಚಿತವಾಗಿಯೇ ಗಟ್ಟಿಮೇಳ ಮೊಳಗಿದ್ದು, ಇಂದು ಕ್ಷಮಾ ಬಿಂದು, ಕ್ಷಮಾ ಬಿಂದುವಿನೊಂದಿಗೆ ಅಧಿಕೃತವಾಗಿ ‘ವೈವಾಹಿಕ’ ಜೀವನಕ್ಕೆ ಕಾಲಿರಿಸುವ ಮೂಲಕ ಭಾರತದ ಮೊದಲ ಸ್ವಯಂ ವಿವಾಹ ನಡೆದುಹೋಗಿದೆ.
ಗುಜರಾತ್ ವಡೋದರಾದ ಈ ಯುವತಿ, ಕೆಲವು ದಿನಗಳ ಹಿಂದಷ್ಟೇ ತನ್ನನ್ನೇ ಸಂಪ್ರದಾಯಬದ್ಧವಾಗಿ ತಾನು ಜೂ.11ರಂದು ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿಕೊಂಡೇ ವಿವಾಹ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರೀ ಸಂಚಲನ ಮೂಡಿಸಿತ್ತು.  ದೇವಳದಲ್ಲಿ ಮದುವೆಯಾಗುವ ಆಕೆಯ ಮನದಿಂಗಿತಕ್ಕೆ ವಿರೋಧಗಳೂ ಕೇಳಿ ಬಂದಿದ್ದವು. ಇದರಿಂದಾಗಿ ಎರಡು ದಿನ ಮುಂಚಿತವಾಗಿಯೇ ಕ್ಷಮಾ ವಿವಾಹ ನಡೆದಿದೆ.
ಮದುವೆ ಆಯ್ತು, ಇನ್ನು ಹನಿಮೂನ್!
ಹಳದಿ, ಮೆಹಂದಿ ಶಾಸ್ತ್ರಗಳನ್ನೂ ಪೂರೈಸಿ ವಿವಾಹವಾಗಿರುವ ‘ಕ್ಷಮಾ ದಂಪತಿ’ ಎರಡು ವಾರ ಕಾಲ ಗೋವಾಗೆ ಹನಿಮೂನ್‌ಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ವಿವಾಹಕ್ಕೆ ಶುಭ ಕೋರಿದ ಎಲ್ಲರಿಗೂ ನಾನು ಕೃತಜ್ಞಳು ಎಂದು ವಿವಾಹದ ಬಳಿಕ ಫೇಸ್ಬುಕ್‌ನಲ್ಲಿ ಆಕೆ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!