Friday, June 9, 2023

Latest Posts

ಇಡ್ಲಿಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು: 8,428 ಪ್ಲೇಟ್‌ ಇಡ್ಲಿ ತಿಂದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರುಚಿ ಮತ್ತು ಆರೋಗ್ಯಕರವಾದ ಉಪಹಾರವೆಂದರೆ ಇಡ್ಲಿ. ಇಡ್ಲಿಯನ್ನು ಬಾಯಲ್ಲಿಟ್ಟುಕೊಂಡರೆ ಬೆಣ್ಣೆಯಂತೆ ಕರಗಿ ಹೋಗುವಂತಿರಬೇಕು.  ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಇಡ್ಲಿ ಪ್ರಿಯರು ಹೆಚ್ಚು. ಯಾವ ಮಟ್ಟಿಗೆ ಇಡ್ಲಿ ಹುಚ್ಚು ಇದೆ ಅಂದರೆ, ಬರೋಬ್ಬರಿ ಆರು ಲಕ್ಷ ರೂಪಾಯಿ ಇಡ್ಲಿಗೆ ವ್ಯಯಿಸುವಷ್ಟು. ಹೌದು, ಸುಮಾರು 8,428 ಪ್ಲೇಟ್ ಇಡ್ಲಿಗಳನ್ನು ಆರ್ಡರ್‌ ಮಾಡಿದ್ದಾನೆ ಒಬ್ಬ ವ್ಯಕ್ತಿ. ಅಂತರಾಷ್ಟ್ರೀಯ ಇಡ್ಲಿ ದಿನದಂದು (ಮಾರ್ಚ್ 30), ಆಹಾರ ವಿತರಣಾ ವೇದಿಕೆ ಕಂಪನಿ ಸ್ವಿಗ್ಗಿ ಈ ವಿಷಯವನ್ನು ಹೇಳಿದೆ. ಹೈದರಾಬಾದ್ ನ ವ್ಯಕ್ತಿಯಿಂದ ಒಂದು ವರ್ಷದಲ್ಲಿ 6 ಲಕ್ಷ ರೂಪಾಯಿ ಮೌಲ್ಯದ 8,428 ಪ್ಲೇಟ್‌ಗಳ ಇಡ್ಲಿಗಳನ್ನು ಆರ್ಡರ್ ಮಾಡಿರುವುದಾಗಿ ಸ್ವಿಗ್ಗಿ ಹೇಳಿದೆ.

ಅಂತರಾಷ್ಟ್ರೀಯ ಇಡ್ಲಿ ದಿನದ ಸಂದರ್ಭದಲ್ಲಿ, ಹೈದರಾಬಾದ್‌ನ ವ್ಯಕ್ತಿಯೊಬ್ಬ ವರ್ಷಕ್ಕೆ 8,428 ಪ್ಲೇಟ್‌ಗಳ ಇಡ್ಲಿಗಳನ್ನು ಆರ್ಡರ್ ಮಾಡಿದ್ದನ್ನು ಸ್ವಿಗ್ಗಿ ಬಹಿರಂಗಪಡಿಸಿದೆ. ಬೆಂಗಳೂರು ಮತ್ತು ಚೆನ್ನೈಗೆ ಹೋದಾಗಲೂ ಹೋದಾಗಲೂ ಇಡ್ಲಿಯನ್ನೇ ಆರ್ಡರ್‌ ಮಾಡಿದ್ದಾರೆಂಬುದು ವಿಶೇಷ.

ಕಳೆದ 12 ತಿಂಗಳಲ್ಲಿ ಒಟ್ಟು 33 ಮಿಲಿಯನ್ ಇಡ್ಲಿಗಳನ್ನು ವಿತರಿಸಲಾಗಿದೆ. ಮಾರ್ಚ್ 30, 2022 ರಿಂದ ಮಾರ್ಚ್ 25, 2023 ರವರೆಗೆ ಸ್ವೀಕರಿಸಿದ ಆರ್ಡರ್‌ಗಳ ಆಧಾರದ ಮೇಲೆ ಸ್ವಿಗ್ಗಿ ಈ ಆಸಕ್ತಿದಾಯಕ ಸಂಗತಿಯನ್ನು ಬಹಿರಂಗಪಡಿಸಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಹೆಚ್ಚಿನ ಆರ್ಡರ್‌ಗಳನ್ನು ಇರಿಸಲಾಗಿದೆ ಎಂದು ತಿಳಿದುಬಂದಿದೆ. ಅದರ ನಂತರ ಸ್ಥಳಗಳು ಕೊಯಮತ್ತೂರು, ಮುಂಬೈ, ಪುಣೆ, ವಿಶಾಖಪಟ್ಟಣಂ, ದೆಹಲಿ, ಕೋಲ್ಕತ್ತಾ ಮತ್ತು ಕೊಚ್ಚಿಯಂತಹ ನಗರಗಳು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!